ಶಿವಮೊಗ್ಗ: ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಪೊಲೀಸ್ ಮೇಲೆಯೇ ಚಾಲಕ ಕಾರ್ ಹರಿಸಲು ಯತ್ನಿಸಿದ ಭಯಾನಕ ಘಟನೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ಸಮೀಪ ಗುರುವಾರ ನಡೆದಿದೆ.
ಪಾರಾಗುವ ಪ್ರಯತ್ನದಲ್ಲಿ ಪೊಲೀಸ್ ಪೇದೆ ಪ್ರಭು ಬಾನೆಟ್ ಮೇಲೆ ಬಿದ್ದರೂ ನಿಲ್ಲಿಸದೆ ಚಾಲಕ ಕಾರ್ ಅನ್ನು ಸುಮಾರು 100 ಮೀಟರ್ ದೂರದವರೆಗೂ ಚಲಾಯಿಸಿದ್ದಾನೆ. ಅದೃಷ್ಟವಶಾತ್ ಕಾರ್ ನಿಂದ ಜಿಗಿದ ಪೊಲೀಸ್ ಕಾನ್ಸ್ಟೇಬಲ್ ಪ್ರಭು ಪ್ರಾಣ ಉಳಿಸಿಕೊಂಡಿದ್ದಾರೆ.
ದಾಖಲೆ ಪರಿಶೀಲನೆ ನಡೆಸುವಾಗ ಪ್ರಭು ಕಾರ್ ಗೆ ಪೊಲೀಸರು ಅಡ್ಡ ಹಾಕಿ ದಾಖಲೆ ಕೇಳಿದ್ದಾರೆ. ಆದರೆ, ಭದ್ರಾವತಿಯ ಹೊಸಮನೆ ಕೇಬಲ್ ಆಪರೇಟರ್ ಮಿಥುನ್ ಜಗದಾಳೆ ಎಂಬಾತ ಕಾರ್ ನಿಲ್ಲಿಸದೇ ಮುಂದೆ ಸಾಗಿದಾಗ ಪ್ರಭು ಅಡ್ಡ ನಿಂತು ಕಾರ್ ನಿಲ್ಲಿಸಲು ಸೂಚಿಸಿದ್ದಾರೆ. ಆಗ ಮಿಥುನ್ ಕಾರ್ ಚಾಲನೆ ಮಾಡಿಕೊಂಡು ಮುಂದೆ ಸಾಗಿದ್ದು, ಬಾನೆಟ್ ಮೇಲೆ ಹತ್ತಿದ್ದಾರೆ. ಚಾಲಕ ವೇಗವಾಗಿ 100 ಮೀಟರ್ ವರೆಗೂ ಕಾರ್ ಚಾಲನೆ ಮಾಡಿಕೊಂಡು ಹೋಗಿದ್ದು, ಅದೃಷ್ಟವಶಾತ್ ಪ್ರಭು ಜಿಗಿದು ಪಾರಾಗಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.