HomeEntertainmentಅಭಿಮಾನಿಗಳ ಒತ್ತಾಯದ ಮೇರೆಗೆ 'ಲಾಯರ್ ಜಗದೀಶ್' ಮತ್ತೊಂದು ಕಿರುತೆರೆ ಶೋ ಗೆ ಎಂಟ್ರಿ.!

ಅಭಿಮಾನಿಗಳ ಒತ್ತಾಯದ ಮೇರೆಗೆ ‘ಲಾಯರ್ ಜಗದೀಶ್’ ಮತ್ತೊಂದು ಕಿರುತೆರೆ ಶೋ ಗೆ ಎಂಟ್ರಿ.!

ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದ ಲಾಯರ್ ಜಗದೀಶ್’ ರನ್ನು ಮತ್ತೆ ಬಿಗ್ ಬಾಸ್ ಮನೆಗೆ ಕರೆಸಿ ಎಂದು ಅಭಿಮಾನಿಗಳು ಕಲರ್ಸ್ ಕನ್ನಡ ವಾಹಿನಿಗೆ ಕೇಳಿಕೊಂಡಿದ್ದರು. ಕೊನೆಗೂ ಅಭಿಮಾನಿಗಳ ಬೇಡಿಕೆಗೆ ಮಣಿದ ವಾಹಿನಿ ಲಾಯರ್ ಜಗದೀಶ್’ ರನ್ನು ಕಳುಹಿಸಿಕೊಟ್ಟಿದೆ. ಆದರೆ ಬಿಗ್ ಬಾಸ್ ಮನೆಗಲ್ಲ..ಮತ್ತೊಂದು ಕಿರುತೆರೆ ಶೋಗೆ.

ಹೌದು. ಬಿಗ್ ಬಾಸ್ ಮನೆಯಲ್ಲಿ ಗಲಾಟೆ ಮಾಡಿ ಹೊರಬಂದ ಜಗದೀಶ್ ಕಲರ್ಸ್ ಕನ್ನಡದ ಸವಿರುಚಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಲರ್ಸ್ನ ‘ಸಚಿರುಚಿ ಸೀಸನ್ 3’ ಶೋಗೆ ಶೆಫ್ ಆಗಿ ಬಂದಿದ್ದಾರೆ. ನಿರೂಪಕಿ ಜಾಹ್ನವಿ ಅವರು ನಡೆಸಿಕೊಡುವ ಸವಿರುಚಿ ಕಾರ್ಯಕ್ರಮದಲ್ಲಿ ಜಗದೀಶ್ ಭಾಗವಹಿಸಿದ್ದಾರೆ. ಇಲ್ಲಿಕೂಡ ಕೆಲವು ಸ್ಪರ್ಧಿಗಳ ಬಗ್ಗೆ ಜಗದೀಶ್ ಮಾತನಾಡಿದ್ದಾರೆ.

‘ಬಿಗ್ ಬಾಸ್’ ಮನೆಯಲ್ಲಿ ಲಾಯರ್ ಜಗದೀಶ್ ಮತ್ತು ರಂಜಿತ್ ನಡುವೆ ಗಲಾಟೆ ನಡೆದಿತ್ತು. ಜಗದೀಶ್ ಮತ್ತು ರಂಜಿತ್ ನಡುವೆ ಜಗಳ ನಡೆದಿದ್ದು, ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದರು. ಇನ್ನೂ, ಜಗದೀಶ್ ಅವರನ್ನು ಮತ್ತೆ ಬಿಗ್ ಬಾಸ್ ಮನೆಯೊಳಗೆ ಕರೆಸಲ್ಲ ಎಂದು ಸುದೀಪ್ ಖಡಕ್ ಆಗಿಯೇ ಹೇಳಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular