alex Certify ರೈತರ ಮಕ್ಕಳಿಗೆ ಮುಖ್ಯ ಮಾಹಿತಿ : ಜೇನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಮಕ್ಕಳಿಗೆ ಮುಖ್ಯ ಮಾಹಿತಿ : ಜೇನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರದಲ್ಲಿ 2024-25ನೇ ಸಾಲಿನಲ್ಲಿ ರೈತರ ಮಕ್ಕಳಿಗೆ 3 ತಿಂಗಳ ಜೇನುಗಾರಿಕೆ ತರಬೇತಿ ಕಾರ್ಯಕ್ರಮವನ್ನು 2024ರ ನವೆಂಬರ್, 05 ರಿಂದ 2025 ರ ಫೆಬ್ರವರಿ, 04 ರವರೆಗೆ (ಪುರುಷ ಅಭ್ಯರ್ಥಿಗಳು ಮಾತ್ರ) ಹಮ್ಮಿಕೊಳ್ಳಲಾಗುವುದು. ಈ ಸಂಬಂಧ ಕೊಡಗು ಜಿಲ್ಲೆಯಿಂದ 18 ರಿಂದ 35 ವರ್ಷ ವಯಸ್ಸಿನೊಳಗಿನ ಒಂದು ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅವಕಾಶವಿದ್ದು (ಇತರೆ-1) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಅಕ್ಟೋಬರ್, 25 ರವರೆಗೆ ಕಚೇರಿಯಲ್ಲಿ/ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ರಾಜ್ಯ ವಲಯ), ಮಡಿಕೇರಿ/ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರ/ಇಲಾಖಾ ವೆಚ್ಸೈಟ್: https://horticulturedir.karnataka.gov.in ನಲ್ಲಿ ಪಡೆಯಬಹುದಾಗಿದೆ.

ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಅಕ್ಟೋಬರ್, 28 ಕೊನೆಯ ದಿನವಾಗಿದೆ. ಮೂಲ ಅಗತ್ಯ ದಾಖಲಾತಿಗಳೊಡನೆ ಎಸ್ಎಸ್ಎಲ್ಸಿ ಅಂಕಪಟ್ಟಿ, ತಂದೆ, ತಾಯಿ, ಪೋಷಕರ ಹೆಸರಿನಲ್ಲಿರುವ ಜಮೀನಿನ ಆರ್ಟಿಸಿ, ತಂದೆ/ತಾಯಿಯವರ ಒಪ್ಪಿಗೆ ಪತ್ರ. ಅರ್ಹ ಅಭ್ಯರ್ಥಿಗಳು ನಿಗಧಿತ ಸಮಯದೊಳಗೆ ಅರ್ಜಿಯನ್ನು ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ/ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ರಾಜ್ಯ ವಲಯ), ಮಡಿಕೇರಿ, ಇಲ್ಲಿಗೆ ಖುದ್ದು ಸಲ್ಲಿಸಬಹುದಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರಾದ ಯೋಗೇಶ್ ಅವರು ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...