ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ) ನಿರ್ವಹಣೆ ಕಾರ್ಯದ ಹಿನ್ನೆಲೆಯಲ್ಲಿ ಇಂದಿನಿಂದ 2 ದಿನಗಳ ಕಾಲ ನಗರದ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಬೆಸ್ಕಾಂ ಪ್ರಕಾರ, ನಗರದ ನಿರ್ದಿಷ್ಟ ಭಾಗಗಳಲ್ಲಿ ಈ ದಿನಗಳಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.ಅ.22 ರಿಂದ ಅ.23 ರವರೆಗೆ ಪವರ್ ಕಟ್ ಇರಲಿದೆ.
ಎಲ್ಲೆಲ್ಲಿ ಪವರ್ ಕಟ್..?
ಓಬಳೇಶ್ ಕಾಲೋನಿ, ರೋಸ್ ಗಾರ್ಡನ್, ರಾಯ್ಪುರ, ಬಿನ್ನಿ ಪೇಟೆ, ಪಾದರಾಯನಪುರ, ಜೆಜೆಆರ್ ನಗರ, ಗೋಪಾಲನ್ ಮಾಲ್, ಮೈಸೂರು ರಸ್ತೆ (1, 2 ಮತ್ತು 3ನೇ ಕ್ರಾಸ್), ಮೋಮಿಂಪುರ, ಜನತಾ ಕಾಲೋನಿ, ಶಾಮನ ಗಾರ್ಡನ್, ರಫತ್ ನಗರ, ರಂಗನಾಥ್ ಕಾಲೋನಿಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಹೊಸಹಳ್ಳಿ ಮುಖ್ಯರಸ್ತೆ, ಪಾರ್ಕ್ ಬಿನ್ನಿ ಪೇಟೆ, ಅಂಜನಪ್ಪ ಗಾರ್ಡನ್, ದೊರೆಸ್ವಾಮಿ ನಗರ, ಫ್ಲವರ್ ಗಾರ್ಡನ್, ನ್ಯೂ ಪೊಲೀಸ್ ಕ್ವಾರ್ಟರ್ಸ್, ಎಸ್.ಡಿ.ಮಠ, ಕಾಟನ್ ಪೇಟೆ, ಅಕ್ಕಿಪೇಟೆ, ಬಾಲಾಜಿ ಕಾಂಪ್ಲೆಕ್ಸ್, ಮಂತ್ರಿ ಪೇಟೆ, ಸುಲ್ತಾನ್ ಪೇಟೆ, ನಲ್ಬಂದವಾಡಿ (ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಎದುರು), ಪೊಲೀಸ್ ರಸ್ತೆ, ಗೋಪಾಲನ್ ಅಪಾರ್ಟ್ ಮೆಂಟ್, ಮರಿಯಪ್ಪ ಎ.ಕೆಪಿಎಸ್ ಮಠ, ಗಂಗಪ್ಪ ಗಾರ್ಡನ್, ಭುವನೇಶ್ವರಿ ನಗರ, ಪ್ರೆಸ್ಟೀಜ್ ವುಡ್ಸ್ ಅಪಾರ್ಟ್ ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಕಾರ್ಯಾರಂಭ ಮಾಡಿದ ಬಳಿಕ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿದ್ಯುತ್ ಸಂಬಂಧಿತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದೆ. ಪರಿಣಾಮವಾಗಿ, ತಾತಗುಣಿ ಮತ್ತು ಹಾರೋಹಳ್ಳಿಯಲ್ಲಿರುವ 220 ಕೆವಿ ಸಬ್ ಸ್ಟೇಷನ್ ಗಳನ್ನು ಮುಚ್ಚಲಾಗುತ್ತದೆ.