ನವದೆಹಲಿ: ಇನ್ನು ಅಸಂಘಟಿತ ಕಾರ್ಮಿಕರಿಗೆ ಒಂದೇ ಸೂರಿನಡಿ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ದೊರೆಯಲಿದೆ.
ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯಾ ಸೋಮವಾರ ‘ಇ- ಶ್ರಮ ಒನ್ ಸ್ಟಾಪ್ ಸಲ್ಯೂಷನ್’ಗೆ ಚಾಲನೆ ನೀಡಲಿದ್ದಾರೆ. ಬಜೆಟ್ ನಲ್ಲಿ ಸರ್ಕಾರ ಈ ಯೋಜನೆ ಪ್ರಕಟಿಸಿತ್ತು. ಯೋಜನೆಗಳ ಬಗ್ಗೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ಇದನ್ನು ರೂಪಿಸಲಾಗಿದೆ.
ಸರ್ಕಾರದ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳ ಕುರಿತಾಗಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಈಗಾಗಲೇ ಇ- ಶ್ರಮ ಪೋರ್ಟಲ್ ನಲ್ಲಿ ಕೇಂದ್ರ ಸಚಿವಾಲಯ ಇಲಾಖೆಗಳ 12 ಯೋಜನೆಗಳನ್ನು ಸಂಯೋಜಿಸಲಾಗಿದೆ. ಅಸಂಘಟಿತ ವಲಯದ 30 ಕೋಟಿಗೂ ಹೆಚ್ಚು ಕಾರ್ಮಿಕರು ಇದರಡಿ ನೋಂದಣಿ ಮಾಡಿಕೊಂಡಿದ್ದಾರೆ.