ಬೆಂಗಳೂರು : ಅ.21 ರಿಂದ ರಾಜ್ಯದ ಶಾಲಾ ಶಿಕ್ಷಕರಿಗೆ ಮರು ಸಿಂಚನ ಯೂ ಟ್ಯೂಬ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಭಾಗವಹಿಸುವಂತೆ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.
ದಿನಾಂಕ:21/10/2024 ರಿಂದ 23/10/2024 ರವರೆಗೆ 6 ರಿಂದ 10 ನೇ ತರಗತಿಯ ಶಿಕ್ಷಕರಿಗೆ refresh teachers’ skills and knowledge (ಮರುಸಿಂಚನ)ಕುರಿತು 2.30 ರಿಂದ 4.30ರವರೆಗೆ 3 ದಿನಗಳು ಯು-ಟ್ಯೂಬ್ ಲೈವ್ ಮೂಲಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಸದರಿ ಕಾರ್ಯಾಗಾರದಲ್ಲಿ ಈಗಾಗಲೇ ಮರುಸಿಂಚನ ತರಬೇತಿ ಪೂರ್ಣಗೊಳಿಸಿರುವ ಶಿಕ್ಷಕರು ಮತ್ತು ತರಬೇತಿ ಪಡೆದ ಹಾಗೂ ಪಡೆಯದೆ ಇರುವ ಅತಿಥಿ ಶಿಕ್ಷಕರು ಮಾತ್ರ ಭಾಗವಹಿಸುವುದು, ಸದರಿ ದಿನಾಂಕಗಳಂದು ಮುಖಾಮುಖಿ ತರಬೇತಿಯಲ್ಲಿ ಭಾಗವಹಿಸುತ್ತಿರುವ ಶಿಕ್ಷಕರು ಆನ್ಲೈನ್ ಕಾರ್ಯಾಗಾರದಲ್ಲಿ ಭಾಗವಹಿಸುವಂತಿಲ್ಲ.
ಯು ಟ್ಯೂಬ್ ಲೈವ್ ಮೂಲಕ ಶಿಕ್ಷಕರು ಭಾಗವಹಿಸುವಂತೆ ಸೂಕ್ತ ಕ್ರಮಕೈಗೊಳ್ಳಲು ಎಲ್ಲಾ ಬಿ.ಇ.ಓ. ಮತ್ತು ಬಿಆರ್ಸಿಗಳಿಗೆ ತಿಳಿಸಲು ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ರವರಿಗೆ ಸೂಚಿಸಿದೆ. ಡಯಟ್ ಹಂತದಲ್ಲಿ ಮರುಸಿಂಚನ ನೋಡಲ್ ಅಧಿಕಾರಿಗಳು ತಪ್ಪದೇ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು.
ಮಧ್ಯಾಹ್ನ 2.30 ರಿಂದ 4.30ರವರೆಗೆ ಯು ಟ್ಯೂಬ್ ಲೈವ್ ಕಾರ್ಯಕ್ರಮ ನಡೆಯಲ್ಲಿದ್ದು ಕಾರ್ಯಕ್ರಮದ ವೇಳಾಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ.ಯು -ಟ್ಯೂಬ್ ಲೈವ್ ಲಿಂಕ್ನ್ನು ಹಾಗೂ ಶಿಕ್ಷಕರಿಗೆ ಪ್ರಿ ಟೆಸ್ಟ್ ಲಿಂಕ್ನ್ನು ಸಹ ಮುಂದಿನ ದಿನಗಳಲ್ಲಿ ಇ-ಮೇಲ್ ಮೂಲಕ ಕಳುಹಿಸಲಾಗುವುದು. ಸ್ಟುಡಿಯೋ ವಿಭಾಗದ ಪುಭಾರಿ ಹಿರಿಯ ಸಹಾಯಕ ನಿರ್ದೇಶಕರು, ಸದರಿ ದಿನದಂದು ಯು ಟ್ಯೂಬ್ ಲೈವ್ ಮೂಲಕ ಕಾರ್ಯಕ್ರಮವನ್ನು ನಡೆಸಲು ಅನುವಾಗುವಂತೆ ಸ್ಟುಡಿಯೋದಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲು ಹಾಗೂ ಸದರಿ ಕಾರ್ಯಕ್ರಮವನ್ನು ಯು ಟ್ಯೂಬ್ ಲೈವ್ ನೀಡಲು ಕ್ರಮ ವಹಿಸಿ ಲಿಂಕ್ ಶೇರ್ ಮಾಡಲು ತಿಳಿಸಿದೆ.