ಬೆಂಗಳೂರು : ಕರ್ನಾಟಕ ಸರ್ಕಾರದಿಂದ 2024-25 ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆಯನ್ನು ಜಿಲ್ಲೆಯ ಎಂಟು ತಾಲ್ಲೂಕಿನ 14 ಹೋಬಳಿಗಳಲ್ಲಿ ಅನುಷ್ಟಾನಗೊಳಿಸಲು ಮಂಜೂರಾತಿ ನೀಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ಜಿಲ್ಲೆಯಲ್ಲಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಹೋಬಳಿ ಮಟ್ಟದ 11 ಬೆಳೆಗಳಾದ ಹುರುಳಿ, ಕುಸುಮೆ, ಹೆಸರು ಬೆಳೆಗಳು ಮಳೆ ಆಶ್ರಿತ ಬೆಳೆಗಳಾಗಿವೆ. ಜೋಳ ಮತ್ತು ಮುಸಿಕಿನ ಜೋಳ ಬೆಳೆಗಳು ನೀರಾವರಿ ಆಶ್ರಿತ ಬೆಳೆಗಳಾಗಿವೆ. ಗೋಧಿ, ಸೂರ್ಯಕಾಂತಿ ಹಾಗೂ ಕಡಲೆ ಬೆಳೆಗಳು ನೀರಾವರಿ ಮತ್ತು ಮಳೆ ಆಶ್ರಿತ ಬೆಳೆಗಳಾಗಿವೆ.
ಗ್ರಾಮ ಪಂಚಾಯತಿ ಮಟ್ಟದ ಬೆಳೆಗಳಾದ ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ ನಗರ, ಕುಂದೋಳ, ನವಲಗುಂದ, ಅಣ್ಣಿಗೇರಿ ತಾಲ್ಲೂಕಿನಲ್ಲಿ ಜೋಳ ಮತ್ತು ಕಡಲೆ ಮಳೆ ಆಶ್ರಿತ ಬೆಳೆಗಳಾಗಿವೆ. ಕಲಘಟಗಿ ತಾಲ್ಲೂಕಿನಲ್ಲಿ ಜೋಳ ಮಳೆ ಆಶ್ರಿತ ಬೆಳೆಯಾಗಿದೆ.ಜೋಳ ಮತ್ತು ಕಡಲೆ ಬೆಳೆಗಳಿಗೆ ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಳ್ಳಲು ನವೆಂಬರ 30, 2024 ಕೊನೆಯ ದಿನವಾಗಿದೆ. ಹುರಳಿ, ಕುಸುಬೆ ಮಳೆ ಆಶ್ರಿತ ಬೆಳೆ ಹಾಗೂ ಸೂರ್ಯಕಾಂತಿ ನೀರಾವರಿ ಮತ್ತು ಮಳೆ ಆಶ್ರಿತ ಬೆಳೆಗೆ ನವೆಂಬರ 15, 2024 ರೊಳಗಾಗಿ ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಳ್ಳಬೇಕು.
ಕಡಲೆ, ಹೆಸರು, ಗೋಧಿ ಮಳೆ ಆಶ್ರಿತ ಬೆಳೆ ಹಾಗೂ ಜೋಳ ಮತ್ತು ಮುಸಿಕಿನ ಜೋಳ ನೀರಾವರಿ ಆಶ್ರಿತ ಬೆಳೆಗಳಿಗೆ ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಳ್ಳಲು ನವೆಂಬರ 30,2024 ಕೊನೆಯ ದಿನವಾಗಿದೆ.
ನೀರಾವರಿ ಆಶ್ರಿತ ಗೋಧಿ ಬೆಳೆಗೆ ಡಿಸೆಂಬರ್ 16, 2024 ರೊಳಗಾಗಿ ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಳ್ಳಬೇಕು. ನೀರಾವರಿ ಆಶ್ರಿತ ಕಡಲೆ ಬೆಳೆಗೆ ಡಿಸೆಂಬರ್ 31, 2024 ರೊಳಗಾಗಿ ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಳ್ಳಬೇಕು.
ಬೇಸಿಗೆ ಹಂಗಾಮಿಗೆ ಹೋಬಳಿ ಮಟ್ಟದ ಬೆಳೆಗಳಾದ ಕಲಘಟಗಿ ತಾಲ್ಲೂಕಿನ ದುಮ್ಮವಾಡ, ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಮತ್ತು ಕುಂದಗೋಳ ತಾಲೂಕಿನ ಸಂಶಿ ನೆಲಗಡಲೆ (ಶೇಂಗಾ) ಬೆಳೆಗೆ ಫೆಬ್ರುವರಿ 28, 2025 ರೊಳಗಾಗಿ ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಳ್ಳಬೇಕು.
ವಿಮೆ ಮಾಹಿತಿಗಾಗಿ ಅನುಷ್ಟಾನ ವಿಮಾ ಕಂಪನಿಯ ಪ್ರತಿನಿಧಿಗಳ ತಾಲೂಕು ಪ್ರತಿನಿಧಿಗಳ ವಿವರ: 2024-25 ನೇ ಸಾಲಿನ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದ ಮಾಹಿತಿಗಾಗಿ ಧಾರವಾಡ ತಾಲ್ಲೂಕಿಗೆ ಸ್ಮಿತಾ ಸಿ. ಡಿ. (7019969942), ಚಂದನಾ ಬಿ. ಆರ್ (9481538869) ಹಾಗೂ ಧಾರವಾಡ ಮತ್ತು ಅಳ್ನಾವರ ತಾಲ್ಲೂಕಿಗೆ ಜಯಂತ ಎಚ್. ಎನ್. (8088608975), ಅಣ್ಣಿಗೇರಿ ತಾಲ್ಲೂಕಿಗೆ ರಾಜಾಭಕ್ಷಿ ದೊಡ್ಡಮನಿ (6362123480), ಹುಬ್ಬಳ್ಳಿ ನಗರ ಮತ್ತು ಹುಬ್ಬಳ್ಳಿ ತಾಲ್ಲೂಕಿಗೆ ಬಿರೇಶ ವಡ್ಡರ (7975191577), ಕಲಘಟಗಿ ತಾಲ್ಲೂಕಿಗೆ ರಾಹುಲ ಪಾಟೀಲ (7619317156), ಕುಂದಗೋಳ ತಾಲ್ಲೂಕಿಗೆ ರಮೇಶ ಹಾವೇರಿ (7259182711) ಹಾಗೂ ನವಲಗುಂದ ತಾಲ್ಲೂಕಿಗೆ ಅಭಿಷೇಕ ಕ್ಯಾಡದ (6361364459) ಅವರನ್ನು ಸಂಪರ್ಕಿಸಬಹುದು ಎಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ಅಗ್ರಿಕಲ್ಚರಲ್ ಇನ್ಸೂರೆನ್ಸ್ ಕಂಪನಿ, ಸ್ಥಳಿಯ ಕೃಷಿ ಇಲಾಖೆ, ಕಂದಾಯ, ಗ್ರಾಮೀಣ ಅಭಿವೃದ್ಧಿ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಮತ್ತು ಸ್ಥಳಿಯ ಹಣಕಾಸು ಸಂಸ್ಥೆಗಳಾದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ, ಸೇವಾ ಬ್ಯಾಂಕುಗಳ ಸಿಬ್ಬಂದಿಯವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.