ಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಯನ್ನು ಇಸ್ರೇಲ್ ದೃಢಪಡಿಸಿದೆ. ಗಾಜಾದಲ್ಲಿ ಸಿನ್ವಾರ್ ಸೇರಿದಂತೆ ಮೂವರು ಉಗ್ರರನ್ನು ಇಸ್ರೇಲ್ ಪಡೆ ಕೊಂದು ಹಾಕಿದೆ.
ಇದರ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಭಿನಂದನೆ ಸಲ್ಲಿಸಿದ್ದಾರೆ. ನೆತನ್ಯಾಹು ಅವರಿಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಬೈಡನ್ ಅಭಿನಂದನೆ ಸಲ್ಲಿಸಿದ್ದು, ಉಗ್ರರ ವಿರುದ್ಧ ಇಸ್ರೇಲ್ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಅಮೆರಿಕ ಸೇನೆ ಭಾಗಿಯಾಗಿಲ್ಲ. ದಿಟ್ಟ ನಿಲುವು ಕೈಗೊಂಡು ಉಗ್ರರ ವಿರುದ್ಧ ಇಸ್ರೇಲ್ ಹೋರಾಟ ನಡೆಸುತ್ತಿದೆ. ಉಗ್ರರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆಗೆ ಅಮೆರಿಕದ ಬೆಂಬಲ ಇದೆ ಎಂದು ಬೈಡನ್ ಅಭಯ ನೀಡಿದ್ದಾರೆ.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಸಿನ್ವಾರ್ ನನ್ನು ಹತ್ಯೆ ಮಾಡಲಾಗಿದೆ.