alex Certify ಇಂದು ವಿಶ್ವ ಆಹಾರ ದಿನ : ಇತಿಹಾಸ ಮತ್ತು ಮಹತ್ವ ತಿಳಿಯಿರಿ |Word Food Day 2024 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ವಿಶ್ವ ಆಹಾರ ದಿನ : ಇತಿಹಾಸ ಮತ್ತು ಮಹತ್ವ ತಿಳಿಯಿರಿ |Word Food Day 2024

ಪೌಷ್ಟಿಕ ಆಹಾರದ ಸೇವನೆ ದೇಶದ ಪ್ರತಿಯೊಂದು ಮಗುವಿನ ಹಕ್ಕು. ಆಹಾರ ಬೆಳೆಯುವ ಗ್ರಾಮೀಣ ಪ್ರದೇಶಗಳಲ್ಲಿ ಪೌಷ್ಟಿಕ ಆಹಾರದ ಕೊರತೆ, ಹಸಿವು ಮತ್ತು ಬಡತನ ಕಿತ್ತುತಿನ್ನುತ್ತಿವೆ. ಆಹಾರದ ಕೊರತೆಯಿಂದಾಗಿ ಸಾಮಾನ್ಯ ಜನರ ಜೀವನದ ಮೇಲೆ ಹೊಡೆತ ಬಿದ್ದಿದೆ. ಜೀವನಪದ್ಧತಿಯಲ್ಲಿ ಸಾಕಷ್ಟುಬದಲಾಯೇ ಹಾಗಾಗಿ ಬಡತನ ಮತ್ತು ಹಸಿವಿನ ವಿರುದ್ಧ ಹೋರಾಟದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಬಹಳ ಅಗತ್ಯ.

ಪ್ರತಿವರ್ಷ ಅಕ್ಟೋಬರ್ 16ರಂದು ವಿವಿಧ ಥೀಮ್ನಡಿಯಲ್ಲಿ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ.
ಯುನೈಟೆಡ್ ನೇಶನ್ಸ್ 1945ರಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಸ್ಥಾಪಿಸಿತು. ಸಂಸ್ಥೆಯ ಸ್ಮರಣಾರ್ಥ ಈ ದಿನವನ್ನು ವಿಶ್ವ ಆಹಾರದಿನವನ್ನಾಗಿ ಆಚರಿಸಲಾಗುತ್ತದೆ. 1981ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ದಿನವನ್ನು ಆಚರಿಸಲಾಯಿತು. ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಆಹಾರ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು. ಆರೋಗ್ಯಕರ ಜೀವನ ನಡೆಸಲು ಪೌಷ್ಟಿಕಾಂಶವುಳ್ಳ ಆಹಾರ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವುದು ವಿಶ್ವಆಹಾರ ದಿನದ ಮುಖ್ಯ ಉದ್ದೇಶಗಳಲ್ಲಿ ಒಂದು. ಅಪೌಷ್ಟಿಕಾಂಶ ಮತ್ತು ಬಡತನವನ್ನು ಎದುರಿಸಲು ಪ್ರತಿಯೊಂದು ರಾಷ್ಟ್ರ ಮತ್ತು ನಾಗರಿಕ ಸಮಾಜದ ವಿವಿಧ ಸಂಸ್ಥೆಗಳು ಕೆಲಸ ಮಾಡಬೇಕಿವೆ. ಹಸಿವಿನ ವಿರುದ್ಧ ಪೋಷಕರು ಮತ್ತು ಸಮಾಜ ಒಟ್ಟಾಗಿ ಹೋರಾಡಬೇಕಿದೆ. ಶಿಕ್ಷಣ ನೀಡುವುದರ ಮೂಲಕ ಈ ಕುರಿತು ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳ ಮೂಲಕ ರೈತರನ್ನು ಪ್ರೋತ್ಸಾಹಿಸಬೇಕು. ಹಸಿವು ಮತ್ತು ಬಡತನದ ತೀವ್ರತೆ ಹೆಚ್ಚುತ್ತಲೇ ಇದೆ. ಆದರೆ ನೈಸರ್ಗಿಕ ಸಂಪನ್ಮೂಲಗಳು ಮಿತಿಯಲ್ಲಿವೆ. ಹಾಗಾಗಿ ಆಹಾರ ಬೆಳೆಯ ಉತ್ಪಾದನೆಗೆ ಹೆಚ್ಚು ಬಂಡವಾಳ ತೊಡಗಿಸಿಬೇಕಾದ ಅಗತ್ಯ ಇದೆ.

ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಬೆಲೆ ಅಂತರ, ನಿರ್ದಿಷ್ಟ ಏರಿಕೆ ಆಹಾರ ಭದ್ರತೆಯನ್ನು ಪ್ರತಿನಿಧಿಸುತ್ತದೆ. ವಿಶ್ವ ಬ್ಯಾಂಕ್ನ ಪ್ರಕಾರ 2010-2011ರಲ್ಲಿ ಆಹಾರ ಬೆಲೆ ಏರಿಕೆಯಿಂದಾಗಿ ಸುಮಾರು 70ದಶಲಕ್ಷ ಜನರು ಬಡತನಕ್ಕೆ ತಳ್ಳಲ್ಪಟ್ಟರು.ಇದರಿಂದಾಗಿ ವಿಶ್ವವ್ಯಾಪಿ ಹಸಿವು ಮತ್ತು ಬಡತನ ತೀವ್ರತೆಯನ್ನು ಪಡೆದುಕೊಂಡಿತು. ಕೃಷಿ ಆಹಾರ ಉತ್ಪಾದನೆಯನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ, ದ್ವಿಪಕ್ಷೀಯ, ಬಹುಪಕ್ಷೀಯ ಮತ್ತು ಸರ್ಕಾರೇತರ ಪ್ರಯತ್ನಗಳನ್ನು ಉತ್ತೇಜಿಸುವ ಸಲುವಾಗಿ ಕೆಲವೊಂದು ಉದ್ದೇಶಗಳನ್ನು ಗುರಿಗಳನ್ನಾಗಿಸಿಕೊಂಡಿದೆ.
ವಿಶ್ವ ಆಹಾರ ಸಂಸ್ಥೆಯ 1979ರಲ್ಲಿ ನಡೆಸಿದ 20ನೇ ಸಾಮಾನ್ಯ ಸಮ್ಮೇಳನದಲ್ಲಿ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ಸದಸ್ಯ ರಾಷ್ಟ್ರಗಳನ್ನು ರಚಿಸಲಾಯಿತು. ಹಂಗೇರಿ ನಿಯೋಜನೆಯ ಹಂಗೇರಿಯನ್ನ ಕೃಷಿ ಮಂತ್ರಿ ಡಾ.ಪಾಲ್ ರೊಮಾನಿ; ವಿಶ್ವ ಆಹಾರದಿನವನ್ನು ವಿಶ್ವದಾದ್ಯಂತ ಆಚರಣೆಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸುಮಾರು 150ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹಸಿವು ಮತ್ತು ಬಡತನದ ಹಿಂದಿರುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ.

ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ವಿಶ್ವದಲ್ಲಿ ಒಟ್ಟು 925 ಮಿಲಿಯನ್ ಜನರಿಗೆ ಸಾಕಷ್ಟು ಆಹಾರ ಸಿಗುತ್ತಿಲ್ಲ. ಶೇ.70ರಷ್ಟು ಜನ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಕೃಷಿ ಆಹಾರ ಮತ್ತು ಆದಾಯದ ಮೂಲ ಆಗಿದೆ. ಆಹಾರ ಬಿಕ್ಕಟ್ಟಿನಿಂದಾಗಿ ಈ ವರ್ಷದ ಥೀಮ್ನ್ನು ಯುನೈಟೆಡ್ ನೇಷನ್ಸ್ ಕೃಷಿ ಸಹಕಾರ-ವಿಶ್ವಕ್ಕೆ ಆಹಾರ ಉಣಿಸುವ ಕೀಲಿ ಕೈ ಎಂಬುದಾಗಿ ಘೋಷಿಸಿದೆ.

ಮನುಷ್ಯನಿಗೆ ಬದುಕಲು ಆಹಾರ ಬಹಳ ಅತ್ಯವಶ್ಯಕವಾದದ್ದು.ಆಹಾರದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರವಿದ್ದು ಅದರಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಆಹಾರಗಳನ್ನು ನಾವು ನೋಡಬಹುದು. ಪ್ರತಿಯೊಬ್ಬರು ಅವರವರ ಅಭಿರುಚಿಗೆ ತಕ್ಕಂತೆ ತಮ್ಮ-ತಮ್ಮ ನೆಚ್ಚಿನ ಆಹಾರವನ್ನು ಹೊಂದಿರುತ್ತಾರೆ. ಹಾಗೇ ವಿಶ್ವ ಆಹಾರ ದಿನದಂದು ಸ್ನೇಹಿತರೇ ಪ್ರತಿಯೊಬ್ಬರು ಆಹಾರವನ್ನು ಹಾಳು ಮಾಡುವುದನ್ನು ಬಿಟ್ಟು ಆಹಾರವಿಲ್ಲದವರಿಗೆ ಆಹಾರ ನೀಡುವ ಬಗ್ಗೆ ಜಾಗೃತಿ ಮೂಡಿಸಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...