ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ನೀಡಬೇಕಿದ್ದ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಗೌರವಧನ ಹಿಂಬಾಕಿ ಮತ್ತು ಅಕ್ಟೋಬರ್ ತಿಂಗಳ ಗೌರವಧನಕ್ಕಾಗಿ ಹಣ ಬಿಡುಗಡೆ ಮಾಡಲಾಗಿದೆ.
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಗೌರವಧನಕ್ಕಾಗಿ 452 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಇದರೊಂದಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ, ರಾಜ್ಯದ 31 ಜಿಲ್ಲೆಗಳ 24 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಿಬ್ಬಂದಿಯ ವೇತನ, ಬಾಹ್ಯ ಮೂಲ, ದಿನಗೂಲಿ ಸಿಬ್ಬಂದಿಯ ಬಾಕಿ ಗೌರವಧನ ಮತ್ತು ಆಡಳಿತ ವೆಚ್ಚಕ್ಕಾಗಿ 42 ಕೋಟಿ ರೂ. ಅನುದಾನವನ್ನು ಕೂಡ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ.