ಪಾಕಿಸ್ತಾನದಲ್ಲಿ ಇಂದು ಮತ್ತು ನಾಳೆ (ಅ.15 & 16) ಎಸ್ಸಿಒ ಶೃಂಗಸಭೆ ನಡೆಯಲಿದ್ದು, ಭಾರತದ ವಿದೇಶಾಂಗ ಸಚಿವ ಜೈಶಂಕರ್ ಭಾಗಿಯಾಗಲಿದ್ದಾರೆ.
ಹೌದು. ಅಕ್ಟೋಬರ್ 15-16 ರಂದು ಇಸ್ಲಾಮಾಬಾದ್ ಆಯೋಜಿಸಿರುವ ಮುಂಬರುವ ಶಾಂಘೈ ಸಹಕಾರ ಸಂಸ್ಥೆ(ಎಸ್ಸಿಒ) ಸಭೆಗಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ . ಎಸ್ಸಿಒ ಸಭೆಯಲ್ಲಿ ಭಾರತೀಯ ನಿಯೋಗವನ್ನು ಜೈಶಂಕರ್ ಮುನ್ನಡೆಸಲಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಕೂಡ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಭಾರತದ ವಿದೇಶಾಂಗ ಸಚಿವರಾಗಿ ಜೈಶಂಕರ್ ಅವರ ಮೊದಲ ಪಾಕಿಸ್ತಾನ ಭೇಟಿ ಇದಾಗಿದೆ. ಈ ತಿಂಗಳು ನಡೆಯಲಿರುವ ಎಸ್ಸಿಒ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನವು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ಕಳುಹಿಸಿತ್ತು.ಪಾಕಿಸ್ತಾನವು ಶಾಂಘೈ ಸಹಕಾರ ಸಂಸ್ಥೆ(SCO) ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್(CHG) ನ ಅಧ್ಯಕ್ಷ ಸ್ಥಾನ ಹೊಂದಿದೆ. ಅಕ್ಟೋಬರ್ನಲ್ಲಿ ಎರಡು ದಿನಗಳ ವೈಯಕ್ತಿಕ SCO ಸರ್ಕಾರದ ಮುಖ್ಯಸ್ಥರ ಸಭೆಯನ್ನು ಆಯೋಜಿಸಿದೆ.