BREAKING: ಉತ್ತರಾಖಂಡ ರೈಲು ಮಾರ್ಗದಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಉತ್ತರಾಖಂಡದ ರೂರ್ಕಿಯಲ್ಲಿ ಸೇನಾ ರೈಲು ಮಾರ್ಗದಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದ್ದು, ತನಿಖೆ ನಡೆಯುತ್ತಿದೆ. ಅಧಿಕಾರಿಗಳು ಶನಿವಾರ ಉತ್ತರಾಖಂಡದ ರೂರ್ಕಿಯ ರೈಲ್ವೆ ಹಳಿಯಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್  ವಶಪಡಿಸಿಕೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಉತ್ತರಾಖಂಡದ ರೂರ್ಕಿಯ ಧಂಧೇರಾ ರೈಲು ನಿಲ್ದಾಣದ ಬಳಿ ಸೇನಾ ರೈಲು ಸಂಚಾರಕ್ಕೆ ಬಳಸುವ ಮಾರ್ಗದಲ್ಲಿ ಗ್ಯಾಸ್ ಸಿಲಿಂಡರ್ ಬಿದ್ದಿರುವುದು ಪತ್ತೆಯಾಗಿದೆ. ಸಿಲಿಂಡರ್ ಪತ್ತೆಯಾದ ಸ್ಥಳವು ಬೆಂಗಾಲ್ ಇಂಜಿನಿಯರ್ ಗ್ರೂಪ್ ಮತ್ತು ಸೆಂಟರ್‌ ನ ಪ್ರಧಾನ ಕಚೇರಿಗೆ ಸಮೀಪದಲ್ಲಿದೆ, ಇದು ಸೇನಾ ವಾಹನಗಳನ್ನು ಸಾಗಿಸಲು ಮತ್ತು ಸರಕು ರೈಲುಗಳ ಮೂಲಕ ಸೈನಿಕರ ಪ್ರಯಾಣವನ್ನು ಸುಗಮಗೊಳಿಸಲು ಪ್ರತ್ಯೇಕ ಟ್ರ್ಯಾಕ್ ಹೊಂದಿದೆ.

ಶನಿವಾರ ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ಇಡಲಾಗಿದೆ. ಈ ಮಾರ್ಗದಲ್ಲಿ ಹಾದು ಹೋಗುತ್ತಿದ್ದ ಗೂಡ್ಸ್ ರೈಲು ಚಾಲಕ ಸಿಲಿಂಡರ್ ಗಮನಿಸಿ, ಸಂಭಾವ್ಯ ಅಪಘಾತವನ್ನು ತಪ್ಪಿಸಲು ತುರ್ತು ಬ್ರೇಕ್‌ ಹಾಕಿದ್ದಾರೆ. ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ರೈಲ್ವೆ ಅಧಿಕಾರಿಗಳು ಸಿಲಿಂಡರ್ ಅನ್ನು ಹಳಿಯಿಂದ ಹೊರ ತೆಗೆದಿದ್ದಾರೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ.

ತನಿಖೆ ಆರಂಭವಾಗುತ್ತಿದ್ದಂತೆ ರೈಲ್ವೇ ರಕ್ಷಣಾ ಪಡೆ ಮತ್ತು ರೈಲ್ವೆ ನೌಕರರು ಸುಮಾರು ಐದು ಕಿಲೋಮೀಟರ್ ವರೆಗೆ ಹಳಿಗಳಲ್ಲಿ ವ್ಯಾಪಕ ಶೋಧ ನಡೆಸಿದರು. ಆದರೆ, ಯಾರು ಸಿಲಿಂಡರ್ ಹಾಕಿದ್ದಾರೆ ಎಂಬ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಎಫ್‌ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಪ್ರಸ್ತುತ ಘಟನೆಯು ಚಲಿಸುತ್ತಿರುವ ರೈಲನ್ನು ಹಳಿತಪ್ಪಿಸುವ ಪ್ರಯತ್ನದಲ್ಲಿ ರೈಲ್ವೆ ಹಳಿಗಳ ಮೇಲೆ ಇರಿಸಲಾದ ಅನುಮಾನಾಸ್ಪದ ವಸ್ತುಗಳ ಸರಣಿಗೆ ಹೆಚ್ಚುವರಿ ಸೇರ್ಪಡೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read