
ಶಿವಮೊಗ್ಗ: ನಾಡಿನೆಲ್ಲೆಡೆ ವಿಜಯದಶಮಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ಅರಮನೆ ನಗರಿ ಮೈಸೂರಿನಲ್ಲಿ ಚಿನ್ನದ ಅಂಬಾರಿ ಜಂಬೂಸವಾರಿಗೆ ಕ್ಷಣಗಣಣೆ ಆರಂಭವಾಗಿದೆ. ಇದೇ ವೇಳೆ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿಯೂ ದಸರಾ ಆಚರಣೆ ಕಳೆಕಟ್ಟಿದ್ದು, ಶಿವಪ್ಪನಾಯಕ ಅರಮನೆಯಲ್ಲಿ ಬೆಳ್ಳಿ ಅಂಬಾರಿಯ ಜಂಬೂಸವಾರಿಗೆ ಸಕಲ ಸಿದ್ಧತೆ ಆರಂಭವಾಗಿದೆ.
650 ಕೆಜಿ ತೂಕದ ಬೆಳ್ಳಿ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊತ್ತು ಸಾಗರ್ ಆನೆ ಸಾಗಲಿದೆ. ಈ ಆನೆಗೆ ಬಹದ್ದೂರ್, ಬಾಲಣ್ಣ ಆನೆಗಳು ಸಾಥ್ ನೀಡಲಿವೆ.
ಶಿವಮೊಗ್ಗದ ಕೋಟೆ ರಸ್ತೆಯ ಶಿವಪ್ಪ ನಾಯಕನ ಅರಮೆಯಿಂದ ಜಂಬೂಸವಾರಿ ಆರಂಭವಾಗಲಿದೆ. ಮಧ್ಯಾಹ್ನ 2:30ಕ್ಕೆ ಜಬೂಸವಾರಿಗೆ ಚಲನೆ ದೊರೆಯಲಿದ್ದು, ಕೋಟೆ ರಸ್ತೆಯಿಂದ ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ಈ ವೃತ್ತ, ಗೋಪಿ ವೃತ್ತ, ಜೈಲು ರಸ್ತೆ ಮಾರ್ಗವಾಗಿ ಫ್ರೀಡಂ ಪಾರ್ಕ್ ವರೆಗೆ ಜಂಬೂಸವಾರಿ ನಡೆಯಲಿದೆ ಬಳಿಕ ಸಂಜೆ 6:30ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಲಿದೆ.