ದೇಶದಲ್ಲಿ ಹಲವು ಹೂಡಿಕೆ ಯೋಜನೆಗಳು ಜಾರಿಯಲ್ಲಿದ್ದು, ಜನರು ಅಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ, ಇದರಲ್ಲಿ ಅವರು ಕಡಿಮೆ ಸಮಯದಲ್ಲಿ ಉತ್ತಮ ಆದಾಯವನ್ನು ಪಡೆಯಬಹುದಾಗಿದೆ.
ಅಂತಹ ಒಂದು ಯೋಜನೆಯ ಮಾಹಿತಿ ಇಲ್ಲಿದ್ದು, ಅದರ ಮೂಲಕ ನೀವು 333 ರೂಪಾಯಿ ಉಳಿಸುವುದರೊಂದಿಗೆ ಕೆಲ ವರ್ಷಗಳಲ್ಲಿ ದೊಡ್ಡ ಮೊತ್ತವನ್ನು ಠೇವಣಿ ಮಾಡಬಹುದಾಗಿದೆ.
ಮ್ಯೂಚುವಲ್ ಫಂಡ್ ಯೋಜನೆಯ ಮೂಲಕ ನೀವು ಕೋಟ್ಯಂತರ ರೂಪಾಯಿ ಪಡೆಯಬಹುದಾಗಿದ್ದು, ಇದಕ್ಕಾಗಿ, ನೀವು ಮ್ಯೂಚುವಲ್ ಫಂಡ್ ಯೋಜನೆಯಲ್ಲಿ SIP ಮಾಡಬೇಕು. ನೀವು ಪ್ರತಿದಿನ ಸುಮಾರು 333 ರೂ. ಗಳನ್ನು ಉಳಿಸಬೇಕಾಗಿದ್ದು, ಈ ಮೊತ್ತ ತಿಂಗಳಿಗೆ ಹತ್ತಿರತ್ತಿರ 10 ಸಾವಿರ ರೂಪಾಯಿಗಳಾಗುತ್ತದೆ. ನೀವು ಸಂಪೂರ್ಣ 21 ವರ್ಷಗಳವರೆಗೆ ಉಳಿತಾಯ ಮಾಡಬೇಕಾಗುತ್ತದೆ.
ಈ ಸಮಯದಲ್ಲಿ ನೀವು ಪ್ರತಿ ವರ್ಷ 12 ಪ್ರತಿಶತದಷ್ಟು ಆದಾಯವನ್ನು ನಿರೀಕ್ಷಿಸಬಹುದಾಗಿದೆ. ಎಲ್ಲವೂ ಸರಿಯಾಗಿ ನಡೆದರೆ, 21 ವರ್ಷಗಳ ನಂತರ ಮೆಚ್ಯೂರಿಟಿ ಸಮಯದಲ್ಲಿ ನೀವು 1.1 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಪಡೆಯುತ್ತೀರಿ.
ಮ್ಯೂಚುವಲ್ ಫಂಡ್ ಹೂಡಿಕೆಯು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುವುದರಿಂದ, ನೀವು ತಜ್ಞರ ಸಲಹೆಯ ಮೇರೆಗೆ ಮಾತ್ರ ಹೂಡಿಕೆ ಮಾಡಬೇಕು.