140 ಪ್ರಯಾಣಿಕರಿದ್ದ ಏರ್ ಇಂಡಿಯ ವಿಮಾನ ತಮಿಳುನಾಡಿನ ತಿರುಚಾನಪಳ್ಳಿ ಏರ್ಪೋರ್ಟ್ ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದ್ದು, ವಿಮಾನದಲ್ಲಿದ್ದ ಎಲ್ಲಾ 140 ಪ್ರಯಾಣಿಕರು ಸಿಬ್ಬಂದಿ ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಸಂಜೆ 5:43ಕ್ಕೆ ಟೇಕಾಫ್ ಆಗಿದ್ದ ವಿಮಾನ ಶಾರ್ಜಾಗೆ ತೆರಳಬೇಕಿತ್ತು.
ಆದರೆ, ಹಾರಾಟದಲ್ಲಿದ್ದ ವೇಳೆಯಲ್ಲೇ ತಾಂತ್ರಿಕ ದೋಷದ ಕಾರಣ ಸುಮಾರು ಮೂರು ಗಂಟೆಯ ಕಾಲ ಆಕಾಶದಲ್ಲಿಗೆ ಗಿರಕಿ ಹೊಡೆಯುತ್ತಿತ್ತು. ಇಂಧನ ಕಡಿಮೆ ಮಾಡುವ ಉದ್ದೇಶದಿಂದ 3 ಗಂಟೆ ಆಕಾಶದಲ್ಲೇ ವಿಮಾನ ಸುತ್ತು ಹೊಡೆದಿತ್ತು. ಪೈಲಟ್ ಎಮರ್ಜೆನ್ಸಿ ಘೋಷಣೆ ಮಾಡಿದ್ದರು. ತಿರುಚಿ ವಿಮಾನ ನಿಲ್ದಾಣದಲ್ಲಿ 20 ಅಗ್ನಿಶಾಮಕದಳ ವಾಹನಗಳು, ಆಂಬುಲೆನ್ಸ್ ಸೇರಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಸಿದ್ಧತಾ ಕ್ರಮ ಕೈಗೊಳ್ಳಲಾಗಿತ್ತು. ಪೈಲಟ್ ಪವಾಡ ಸದೃಶ ರೀತಿಯಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.