Viral Video | ಮತ್ತೊಬ್ಬಳೊಂದಿಗೆ ʼರೆಡ್ ಹ್ಯಾಂಡ್ʼ ಆಗಿ ಸಿಕ್ಕಿಬಿದ್ದ ಬಾಯ್ ಫ್ರೆಂಡ್; ಹಿಗ್ಗಾಮುಗ್ಗಾ ʼಗೂಸಾʼ ಕೊಟ್ಟ ಗೆಳತಿ 10-10-2024 2:42PM IST / No Comments / Posted In: Latest News, Live News, International ಇತ್ತೀಚೆಗೆ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ತನ್ನ ಬಾಯ್ ಫ್ರೆಂಡ್ ಮತ್ತೊಬ್ಬಳೊಂದಿಗೆ ಕೆಫೆಯಲ್ಲಿ ಕುಳಿತಿರುವಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದ ಆತನ ಗೆಳತಿ ತಪರಾಕಿ ನೀಡಿದ್ದಾಳೆ. ವೈರಲ್ ವೀಡಿಯೊ ಖಾತೆದಾರ ʼಘರ್ ಕಾ ಕಾಲೇಶ್ʼ ಎಂಬವರ X (ಹಿಂದೆ Twitter) ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಲಾಗಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಗೆಳತಿ, ಬಾಯ್‌ಫ್ರೆಂಡ್‌ಗೆ ಕೆಫೆಯೊಂದರಲ್ಲಿ ಮುಖಾಮುಖಿಯಾಗಿದ್ದಾಳೆ. ಈ ಸಂದರ್ಭದಲ್ಲಿ ಅವನು ಮತ್ತೊಬ್ಬಳೊಂದಿಗೆ ಕುಳಿತಿದ್ದು, ಇದನ್ನು ನೋಡಿ ಆಘಾತಗೊಂಡ ಆಕೆ ಅಳತೊಡಗಿದ್ದಾಳೆ. ಅಷ್ಟೇ ಅಲ್ಲ ಆತನಿಗೆ ಕಪಾಳಮೋಕ್ಷ ಮಾಡಲು ಮುಂದಾಗಿದ್ದಾಳೆ. ಘರ್ ಕಾ ಕಾಲೇಶ್ ಪೋಸ್ಟ್ ಮಾಡಿದ ವೀಡಿಯೊ ಆನ್‌ಲೈನ್‌ನಲ್ಲಿ ಸಾಕಷ್ಟು ಸಂಚಲನವನ್ನು ಉಂಟುಮಾಡಿದೆ. ಹೆಚ್ಚಿನ ವೀಕ್ಷಕರು ಆತನ ಗೆಳತಿ ಕುರಿತು ಸಹಾನುಭೂತಿ ಹೊಂದಿದ್ದರೆ, ಕೆಲವರು ಸಾರ್ವಜನಿಕವಾಗಿ ಈ ರೀತಿ ಮಾಡಿದ್ದಕ್ಕೆ ಟೀಕಿಸಿದ್ದಾರೆ. ಸಾವಿರಾರು ವೀಕ್ಷಣೆಗಳು ಮತ್ತು ಕಾಮೆಂಟ್‌ಗಳು ವೀಡಿಯೊವನ್ನು ಎಕ್ಸ್‌ನಲ್ಲಿ ಟ್ರೆಂಡಿಂಗ್ ನಲ್ಲಿ ಇಟ್ಟಿದೆ. Kalesh over Girl-Friend Caught her Boy with some other Lady inside Cafe pic.twitter.com/IsaosLKXGb — Ghar Ke Kalesh (@gharkekalesh) October 6, 2024