alex Certify ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಅವಧಿ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಅವಧಿ ವಿಸ್ತರಣೆ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳ 2024-25 ನೇ ಸಾಲಿನ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಿ ಅವಕಾಶ ಕಲ್ಪಿಸಲಾಗಿದೆ.

2024-25ನೇ ಸಾಲಿಗೆ ಖಾಸಗಿ ಶಾಲೆಗಳ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣಕ್ಕೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಆಡಳಿತ ಮಂಡಳಿಗೆ ದಿನಾಂಕ:25-07-2024 ರಿಂದ 30-09-2024 ರವರೆಗೆ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ತಂತ್ರಾಂಶದಲ್ಲಿ ಲಭ್ಯವಿರುವ ಮಾಹಿತಿಯಂತೆ ಪರಿಶೀಲಿಸಲಾಗಿ ನಿಗದಿಪಡಿಸಿದ ಕಾಲಾವಕಾಶದೊಳಗೆ ಇನ್ನೂ ಶೇ.50ರಷ್ಟು ಖಾಸಗಿ ಶಾಲೆಗಳು ಮಾನ್ಯತೆ ನವೀಕರಣ ಪಡೆಯಲು ಅರ್ಜಿ ಸಲ್ಲಿಸದೇ ಇರುವುದು ಗಮನಿಸಲಾಗಿದೆ.

ಕಾಯ್ದೆ ಮತ್ತು ನಿಯಮಗಳನುಸಾರ ಶಾಲೆಗಳನ್ನು ಅಧಿಕೃತ ಎಂದು ಪರಿಗಣಿಸಲು ಶಾಲೆಗಳು ಆಯಾ ಅವಧಿಯಲ್ಲಿ ಮಾನ್ಯತೆಯನ್ನು ನವೀಕರಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಮಾನ್ಯತೆ ನವೀಕರಿಸದಿದ್ದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೊಂದಾಯಿಸಲು, ಆ‌ರ್.ಟಿ.ಇ. ಶುಲ್ಕ, ಮರುಪಾವತಿಗೆ ಪ್ರಸ್ತಾವನೆ ಪರಿಗಣಿಸಲು, ಅನುದಾನಿತ ಶಾಲಾ ಶಿಕ್ಷಕರ ವೇತನ ಪಾವತಿಗೆ ಅವಕಾಶವಿರುವುದಿಲ್ಲ. ಆದ್ದರಿಂದ ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಸಕ್ಷಮ ಪ್ರಾಧಿಕಾರಿಗಳಾದ ಉಪನಿರ್ದೇಶಕರು(ಆಡಳಿತ) ಇವರು ವೈಯುಕ್ತಿಕ ಗಮನ ಹರಿಸಿ ತಮ್ಮ ವ್ಯಾಪ್ತಿಯಲ್ಲಿ ಈವರೆವಿಗೂ 2024-25ನೇ ಸಾಲಿಗೆ ಮಾನ್ಯತೆ ಪಡೆಯಲು ಅಗತ್ಯ ದಾಖಲೆ/ಮಾಹಿತಿಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸದಿರುವ ಶಾಲಾ ಆಡಳಿತ ಮಂಡಳಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿ ಅಗತ್ಯ ಕ್ರಮವಹಿಸಲು ತಿಳಿಸಿದೆ.

ತಿದ್ದುಪಡಿ ತಂದಿರುವ ಅಂಶಗಳಂತೆ ಅಗತ್ಯ ಮಾಹಿತಿ/ದಾಖಲೆಗಳಿಂದ ಮಾನ್ಯತೆ ಅರ್ಜಿಯು ತಿರಸ್ಕೃತಗೊಂಡ ಶಾಲಾ ಆಡಳಿತ ಮಂಡಳಿಗಳಿಗೆ ಈಗಾಗಲೇ ಪಾವತಿಸಿದ ಶುಲ್ಕವನ್ನು ಬಳಸಿ ಇದೇ ಶೈಕ್ಷಣಿಕ ವರ್ಷದಲ್ಲಿ ಒಟ್ಟಾರೆ ಗರಿಷ್ಠ 03 ಬಾರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿರುವಂತೆ ಅರ್ಜಿ ತಿರಸ್ಕೃತಗೊಂಡಿರುವ ಶಾಲಾ ಆಡಳಿತ ಮಂಡಳಿಗಳು ವಿಳಂಬಕ್ಕೆ ಅವಕಾಶ ನೀಡದೇ ತಕ್ಷಣವೇ ಮರು ಅರ್ಜಿ ಸಲ್ಲಿಸಲು ಕ್ರಮವಹಿಸುವುದು. ಹಾಗೂ ಸಕ್ಷಮ ಪ್ರಾಧಿಕಾರಿಗಳು ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ನಿಗದಿಪಡಿಸಿದ ಎಲ್ಲಾ ಮಾನದಂಡಗಳನ್ನು ಪೂರೈಸಿದ ಶಾಲೆಗಳಿಗೆ ಸುತ್ತೋಲೆಯಲ್ಲಿ ಸೂಚಿಸಿದಂತೆ ಮಾನ್ಯತೆ ನವೀಕರಣವನ್ನು ಮೊದಲ ಬಾರಿಗೆ 10 ವರ್ಷಗಳಿಗೆ ನೀಡಲು ಅಗತ್ಯ ಕ್ರಮವಹಿಸುವುದು ಎಂದು ತಿಳಿಸಲಾಗಿದೆ.

2024-25ನೇ ಸಾಲಿಗೆ ಪ್ರಥಮ ಮಾನ್ಯತೆ / ಮಾನ್ಯತೆ ನವೀಕರಣ ಸಂಬಂಧ ಹೊಸದಾಗಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಿ ಅವಕಾಶ ನೀಡಿ ವೇಳಾಪಟ್ಟಿ ನಿಗದಿಪಡಿಸಲಾಗಿದೆ.

2024-25 ಶಾಲಾ ಆಡಳಿತ ಮಂಡಳಿಗಳು ಆನ್ ಲೈನ್ ಮೂಲಕ ಪ್ರಥಮ ಮಾನ್ಯತೆ / ಮಾನ್ಯತೆ ನವೀಕರಣಕ್ಕೆ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-10-2024 ರಿಂದ 04-11-2024.

ಉಪನಿರ್ದೇಶಕರ ಕಛೇರಿಯಲ್ಲಿ ಆನ್‌ಲೈನ್ ಮೂಲಕ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಲು ವಿಷಯ ನಿರ್ವಾಹಕರು (DCW) ಅರ್ಜಿ ಸ್ವೀಕೃತ ದಿನಾಂಕದಿಂದ 5 ಕರ್ತವ್ಯದ ದಿನಗಳು 06-10-2024 ರಿಂದ 11-11-2024. ಪತ್ರಾಂಕಿತ ಸಹಾಯಕರು(DOF) ಅರ್ಜಿ ಸ್ವೀಕೃತ ದಿನಾಂಕದಿಂದ 5 ಕರ್ತವ್ಯದ ದಿನಗಳು 07-10-2024 ರಿಂದ 16-11-2024.

ಉಪನಿರ್ದೇಶಕರು (ಆಡಳಿತ) ಆಕ್ಷೇಪಣೆ ಸಹಿತ ಅರ್ಜಿಗಳನ್ನು ಇವರು ಆಡಳಿತ ಮಂಡಳಿಗೆ ರೋಲ್ ಬ್ಯಾಕ್ ಮಾಡಲು ಕಾಲಾವಧಿ ಅರ್ಜಿ ಸ್ವೀಕೃತ ದಿನಾಂಕದಿಂದ 05 ಕರ್ತವ್ಯದ ದಿನಗಳು 08.11.2024 ರಿಂದ 25.11.2024.

ಆಡಳಿತ ಮಂಡಳಿಗಳು ಆಕ್ಷೇಪಣೆಯನ್ನು ಸರಿಪಡಿಸಿ, ಅರ್ಜಿಯನ್ನು ಆನ್ ಲೈನ್ ಮೂಲಕ ಉಪನಿರ್ದೇಶಕರಿಗೆ ಹಿಂತಿರುಗಿಸಲು ಕೊನೆಯ ದಿನಾಂಕ ಆಡಳಿತ ಮಂಡಳಿ ಅರ್ಜಿ ಸ್ವೀಕೃತ ದಿನಾಂಕದಿಂದ 07 ಕರ್ತವ್ಯದ ದಿನಗಳು 09-10-2024 ರಿಂದ 03-12-2024.

ಸ್ವೀಕರಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸಿ ಅರ್ಹರಿಗೆ ಮಾನ್ಯತೆ / ಮಾನ್ಯತೆ ನವೀಕರಿಸಿ, ನವೀಕರಣ ಪ್ರಮಾಣ ಪತ್ರವನ್ನು ನೀಡಲು ಅಥವಾ ತಿರಸ್ಕರಿಸಿದ್ದಲ್ಲಿ ತಿರಸ್ಕೃತ ಆದೇಶ ಕೊನೆಯ ದಿನಾಂಕ ಅರ್ಜಿ ಸ್ವೀಕೃತ ದಿನಾಂಕದಿಂದ 05 ಕರ್ತವ್ಯದ ದಿನಗಳು 10-10-2024 ರಿಂದ 09-12-2024.

ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಮತ್ತು ಕಾಲಾವಧಿ ಮುಗಿದ ಕಾರಣ ನವೀಕರಿಸಿದ ಪರಿಷ್ಕೃತ ದಾಖಲೆಗಳನ್ನು ಆಡಳಿತ ಮಂಡಳಿಗಳು ಎಸ್.ಎ.ಟಿ.ಎಸ್ ನಲ್ಲಿ ಅಭಿವೃದ್ಧಿಪಡಿಸಿರುವ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿ ನಂತರ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅಪ್‌ಡೇಟ್ ಮಾಡುವುದು. ಅದರಲ್ಲಿನ ಮಾಹಿತಿಗಳನ್ನು ಪರಿಶೀಲಿಸಿ ಮಾನ್ಯತೆ ನವೀಕರಣಕ್ಕೆ ಪರಿಗಣಿಸಲಾಗುವುದು.

ತಮ್ಮ ಜಿಲ್ಲೆಯ ಯಾವುದೇ ಶಾಲೆಯು ಮಾನ್ಯತೆ ನವೀಕರಿಸದ ಕಾರಣದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೋಂದಾಯಿಸಲು ತೊಂದರೆಯಾದಲ್ಲಿ ಅಥವಾ ಶಾಲೆಗಳು ಅನಧಿಕೃತ ಎಂದು ಪರಿಗಣಿಸಲು ಕಾರಣರಾದಲ್ಲಿ ಆಯಾ ಜಿಲ್ಲಾ ಉಪನಿರ್ದೇಶಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...