
ಬೆಂಗಳೂರು: ಸೆಪ್ಟೆಂಬರ್ 24 ರಿಂದ 30ರವರೆಗೆ ನಡೆದ ಎಸ್ಎಸ್ಎಲ್ಸಿ ಮಧ್ಯ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಅಕ್ಟೋಬರ್ 25ರಂದು ಪ್ರಕಟಿಸುವಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚಿಸಿದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅರ್ಧ ವಾರ್ಷಿಕ ಪರೀಕ್ಷೆಗೂ ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ನೀಡಲಾಗಿತ್ತು. ಅಕ್ಟೋಬರ್ 20 ಕ್ಕೆ ದಸರಾ ರಜೆ ಮುಗಿಯಲಿದೆ. ನಂತರದ 3-4 ದಿನಗಳಲ್ಲಿ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿ ವಿಷಯ ಶೀಕ್ಷಕರು ಅಕ್ಟೋಬರ್ 25 ರಂದು ಫಲಿತಾಂಶ ಪ್ರಕಟಿಸಬೇಕು.
ಶಾಲೆಗಳಲ್ಲಿ ಫಲಿತಾಂಶ ಪ್ರಕಟಿಸಿದ ಮಾಹಿತಿಯನ್ನು ಅಕ್ಟೋಬರ್ 29ರ ಒಳಗೆ ಮುಖ್ಯ ಶಿಕ್ಷಕರಿಂದ ಪಡೆದು ಇಲಾಖೆ ಅಧಿಕಾರಿಗಳು ಸಲ್ಲಿಸುವಂತೆ ಮಂಡಳಿ ಸೂಚನೆ ನೀಡಿದೆ.