alex Certify ಸೊಳ್ಳೆಗಳಿಂದ ಪಾರಾಗಲು ಕಾಯಿಲ್‌ ಬಳಸುತ್ತೀರಾ…..? ವಿಷಕ್ಕಿಂತ ಕಡಿಮೆಯಿಲ್ಲ ಇದರ ಪರಿಣಾಮ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಳ್ಳೆಗಳಿಂದ ಪಾರಾಗಲು ಕಾಯಿಲ್‌ ಬಳಸುತ್ತೀರಾ…..? ವಿಷಕ್ಕಿಂತ ಕಡಿಮೆಯಿಲ್ಲ ಇದರ ಪರಿಣಾಮ……!

ಮಳೆಗಾಲವನ್ನು ಸೊಳ್ಳೆಗಳಿಗೆ ಪರಿಪೂರ್ಣ ಸಂತಾನೋತ್ಪತ್ತಿ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾ ಜ್ವರದ ಅಪಾಯ ಹೆಚ್ಚಾಗಿರುತ್ತದೆ. ಹಾಗಾಗಿ ಸೊಳ್ಳೆಗಳಿಂದ ಪಾರಾಗಲು ಜನರು ಕಾಯಿಲ್‌ ಬಳಸುತ್ತಾರೆ. ಈ ಸುರುಳಿಗಳಿಂದ ಹೊರಹೊಮ್ಮುವ ಹೊಗೆ, ಸೊಳ್ಳೆಗಳಿಗೆ ನಿರೋಧಕವಾಗಿರಬಹುದು. ಆದರೆ ಇದು ಮನುಷ್ಯರಿಗೆ ತುಂಬಾನೇ ಅಪಾಯಕಾರಿ.

ಒಂದು ಸೊಳ್ಳೆ ಕಾಯಿಲ್‌ನಿಂದ ಹೊರಸೂಸುವ ಹೊಗೆಯ ಅಪಾಯ ಹಲವಾರು ಸಿಗರೇಟ್‌ಗಳನ್ನು ಸೇದುವುದಕ್ಕೆ ಸಮನಾಗಿರುತ್ತದೆ.  ಸೊಳ್ಳೆ ಕಾಯಿಲ್‌ ಅನೇಕ ರಾಸಾಯನಿಕಗಳನ್ನು ಹೊಂದಿರುತ್ತದೆ, ಅದು ಸುಟ್ಟ ನಂತರ ಹೊಗೆಯ ಮೂಲಕ ನಮ್ಮ ಶ್ವಾಸಕೋಶವನ್ನು ತಲುಪುತ್ತದೆ. ಇದರ ಪರಿಣಾಮ ಆರೋಗ್ಯದ ಮೇಲೆ ದೀರ್ಘಾವಧಿಯದ್ದಾಗಿರುತ್ತದೆ. ಹಾಗಾಗಿ ಭವಿಷ್ಯದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಅಸ್ತಮಾ ಕೂಡ ಬರಬಹುದು. ಅಷ್ಟೇ ಅಲ್ಲ ಸ್ಕಿನ್‌ ಅಲರ್ಜಿಗೂ ಇದು ಕಾರಣವಾಗುತ್ತದೆ. ಇದರ ಪರಿಣಾಮವು ವಿಷಕಾರಿಯಾಗಿದ್ದು ಅದು ನಮ್ಮ ಮೆದುಳಿಗೆ ಹಾನಿ ಮಾಡುತ್ತದೆ.

ಸೊಳ್ಳೆ ಕಾಯಿಲ್‌ ಪರಿಸರಕ್ಕೂ ಮಾರಕ. ಇದರ ವಿಷಕಾರಿ ಹೊಗೆ ಗಾಳಿಯನ್ನು ಕಲುಷಿತಗೊಳಿಸುತ್ತದೆ. ಇದನ್ನು ಬಳಸಿದ ನಂತರ ನಮ್ಮ ಕೈಗಳನ್ನು ತೊಳೆದಾಗ, ಅದು ಅನೇಕ ಜಲಮೂಲಗಳಲ್ಲಿ ಬೆರೆತು ಅಲ್ಲಿನ ಪ್ರಾಣಿಗಳ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಮತ್ತು ಕೊಳದಲ್ಲಿ ವಾಸಿಸುವ ಮೀನುಗಳ ಮೂಲಕ ನಮ್ಮ ಆಹಾರ ಸರಪಳಿಯನ್ನು ಪ್ರವೇಶಿಸುತ್ತದೆ.

ಸೊಳ್ಳೆಗಳನ್ನು ನಿವಾರಿಸಲು ಕಾಯಿಲ್‌ ಬದಲು ಇತರ ಸುರಕ್ಷಿತ ಆಯ್ಕೆಗಳನ್ನು ಹುಡುಕಬಹುದು. ಇತ್ತೀಚಿನ ದಿನಗಳಲ್ಲಿ  ಮಾರುಕಟ್ಟೆಯಲ್ಲಿ ಹಲವಾರು ರೀತಿಯ ವಿದ್ಯುತ್ ನಿವಾರಕಗಳು ಮತ್ತು ಯಂತ್ರಗಳು ಲಭ್ಯವಿವೆ. ಅವುಗಳನ್ನು ಬಳಕೆ ಮಾಡಬಹುದು. ಮಲಗುವಾಗ ಸೊಳ್ಳೆ ಪರದೆಯನ್ನು ಬಳಸಿ, ಇದು ಸುರಕ್ಷಿತ ಆಯ್ಕೆಯಾಗಿದೆ. ಇದಲ್ಲದೆ ಮನೆ ಮತ್ತು ಸುತ್ತಮುತ್ತಲ ಸ್ಥಳವನ್ನು ಸ್ವಚ್ಛವಾಗಿಡಿ, ಎಲ್ಲಿಯೂ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...