
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಆರಂಭವಾಗಲಿದೆ. ಇದೇ ವೇಳೆ ಗುಂಬಜ್ ಮಾದರಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.
ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಹಸಿರು ಚಪ್ಪರದಲ್ಲಿ ವಿಭಿನ್ನವಾಗಿ ವಿದ್ಯುತ್ ಅಲಂಕಾರ ಮಾಡಲಾಗಿದ್ದು, ಹಸಿರು ಬಣ್ಣದ ದೀಪಾಲಂಕರ ಕಂಗೊಳಿಸುತ್ತಿದೆ. ಚಪ್ಪರದ ಮೇಲ್ಭಾಗದಲ್ಲಿ ಗುಂಬಜ್ ಹೋಲುವ ಮಾದರಿಯನ್ನು ನಿರ್ಮಾಣ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಮಾಜಿ ಸಂಸದ ಪ್ರತಾಪ್ ಸಿಂಹ ಸಯ್ಯಾಜಿರಾವ್ ರಸ್ತೆಯಲ್ಲಿರುವ ಇದನ್ನು ಬದಲಾಯಿಸಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಈ ಕುರಿತಾಗಿ ಪರ, ವಿರೋಧ ಚರ್ಚೆ ನಡೆದಿದೆ.
ಈ ಹಿಂದೆ ಮೈಸೂರಿನಲ್ಲಿ ಬಸ್ ನಿಲ್ದಾಣ ಮೇಲ್ಭಾಗ ಗುಂಬಜ್ ಮಾದರಿ ನಿರ್ಮಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು.