ನಾಳೆಯಿಂದ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ದಸರಾ ರಜೆ

ಬೆಂಗಳೂರು: ನಾಳೆಯಿಂದ ನವರಾತ್ರಿ ಆರಂಭವಾಗುತ್ತಿದ್ದು, ಮತ್ತೊಂದೆಡೆ ನಾಡ ಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯುತ್ತಿದೆ. ಈ ನಡುವೆ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ನಾಳೆ ಅಕ್ಟೋಬರ್ 3ರಿಂದ ದಸರಾ ರಜೆ ಘೋಷಣೆ ಮಾಡಿದೆ.

ಅಕ್ಟೋಬರ್ 3ರಿಂದ 20ರವರೆಗೆ ದಸರಾ ರಜೆ ಆರಂಭವಾಗಲಿದ್ದು, ನಾಳೆಯಿಂದಲೇ ಮಕ್ಕಳಿಗೆ ದಸರಾ ರಜೆ ಸಂಭ್ರಮ. ಒಟ್ಟು 17 ದಿನಗಳ ಕಾಲ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ ಇರಲಿದೆ.

ಇಂದು ಅ.2 ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದ ಬಳಿಕ 2024-25ನೇ ದಸರಾ ರಜೆ ಆರಂಭವಾಗಲಿದೆ. ಅಕ್ಟೋಬರ್ 21ರಿಂದ ಎರಡನೇ ಅವಧಿ ಆರಂಭವಾಗಲಿದ್ದು, 2025 ಏಪ್ರಿಲ್ 10ರವರೆಗೆ ಶಾಲೆಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read