ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಜಸ್ಟ್ ಮ್ಯಾರೀಡ್’ ಚಿತ್ರ ಈಗಾಗಲೇ ತನ್ನ ಟೈಟಲ್ಲಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಇದೇ ಅಕ್ಟೋಬರ್ 4ರಂದು ಈ ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ ಬರಲಿದ್ದು, ದಕ್ಷಿಣ ಭಾರತದ 3 ಖ್ಯಾತ ನಿರ್ದೇಶಕರ ಕೈಯಲ್ಲಿ ಈ ಟೀಸರ್ ಲಾಂಚ್ ಮಾಡಿಸುವುದಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಸಿ ಆರ್ ಬಾಬಿ ನಿರ್ದೇಶನದ ಈ ಚಿತ್ರವನ್ನು abbs ಸ್ಟುಡಿಯೋಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಭಾರತದ ಖ್ಯಾತ ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ. ಆಶಿಕ್ ಕುಸುಗೋಳಿ ಸಂಕಲನ,ರಘು ನಿಡುವಳ್ಳಿ ಸಂಭಾಷಣೆ, ಬಾಬಾ ಭಾಸ್ಕರ್ ನೃತ್ಯ ನಿರ್ದೇಶನವಿದೆ.