ಮಹೀಂದ್ರಾ ಸ್ಕಾರ್ಪಿಯೊ ಭಾರತೀಯ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಇದರ ಬಲವಾದ ರಚನೆ, ಶಕ್ತಿಯುತ ಎಂಜಿನ್ ಮತ್ತು ಆಕರ್ಷಕ ವಿನ್ಯಾಸ ಗ್ರಾಹಕರಿಗೆ ಇಷ್ಟವಾಗಿದೆ. ವಿಶೇಷ ಅಂದ್ರೆ 2024ರ ಆಗಸ್ಟ್‌ನಲ್ಲಿ ಮಹಿಂದ್ರಾ ಸ್ಕಾರ್ಪಿಯೊ ಮಾರಾಟ ಶೇ.39ರಷ್ಟು ಹೆಚ್ಚಾಗಿದೆ. ಕಾರಿನ ಜನಪ್ರಿಯತೆಗೆ ಇದು ಸಾಕ್ಷಿ. ಈ SUV ತನ್ನ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯ ಜೊತೆಗೆ ಸುಂದರವಾದ ವಿನ್ಯಾಸದ ಮೂಲಕವೂ ಗ್ರಾಹಕರನ್ನು ಸೆಳೆಯುತ್ತಿದೆ.
ಮಹೀಂದ್ರ ಸ್ಕಾರ್ಪಿಯೊವನ್ನು ಮೊದಲು 2002ರಲ್ಲಿ ಬಿಡುಗಡೆ ಮಾಡಲಾಯಿತು. ಅಂದಿನಿಂದಲೂ ಇದು ಬಹಳ ಜನಪ್ರಿಯವಾಗಿದೆ. ಈ ವಾಹನದ ಬಾಹ್ಯ, ಆಂತರಿಕ ಮತ್ತು ಪವರ್‌ಟ್ರೇನ್‌ನಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಆದರೆ ಅದರ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆ ಇನ್ನೂ ಮೊದಲಿನಂತೆಯೇ ಉಳಿದಿದೆ.
ಮಹೀಂದ್ರ ಸ್ಕಾರ್ಪಿಯೊ ಎರಡು ಮಾದರಿಗಳಲ್ಲಿ ಬರುತ್ತದೆ. ಮಹೀಂದ್ರ ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್. ಸ್ಕಾರ್ಪಿಯೋ ಎನ್ 2.2 ಲೀಟರ್ ಡೀಸೆಲ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಇದು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ಹೊಂದಿದೆ. ಮತ್ತೊಂದೆಡೆ, ಸ್ಕಾರ್ಪಿಯೊ ಕ್ಲಾಸಿಕ್ ಕೇವಲ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿದೆ. ಮಹೀಂದ್ರಾ ಸ್ಕಾರ್ಪಿಯೋ ಬೆಲೆಗಳು 13.85 ಲಕ್ಷದಿಂದ ಪ್ರಾರಂಭವಾಗುತ್ತವೆ, ಪ್ರೀಮಿಯಂ ಮಾದರಿಯ ಬೆಲೆ 24.54 ಲಕ್ಷದವರೆಗಿದೆ. ಈ SUV ಟಾಟಾ ಹ್ಯಾರಿಯರ್, ಟಾಟಾ ಸಫಾರಿ, ಕಿಯಾ ಸೆಲ್ಟೋಸ್ ಮತ್ತು ಹುಂಡೈ ಕ್ರೆಟಾದಂತಹ SUV ಗಳೊಂದಿಗೆ ಸ್ಪರ್ಧಿಸುತ್ತದೆ.
ಮಹೀಂದ್ರಾ ಸ್ಕಾರ್ಪಿಯೊದ ಫೀಚರ್‌ಗಳು ಬಹಳ ವಿಭಿನ್ನವಾಗಿವೆ. ಕಾರಿನ ವಿಶಾಲವಾದ ಕ್ಯಾಬಿನ್ ಮತ್ತು ಆರಾಮದಾಯಕ ಆಸನಗಳು ಪ್ರಯಾಣಕ್ಕೆ ಸೂಕ್ತವಾಗಿವೆ. ಬಲವಾದ SUV ಅನ್ನು ಹುಡುಕಾಟದಲ್ಲಿರುವವರಿಗೆ ಮಹೀಂದ್ರ ಸ್ಕಾರ್ಪಿಯೋ ಉತ್ತಮ ಆಯ್ಕೆಯಾಗಿದೆ.