ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದೆ. ಆದರೆ ಎಫ್ ಐಆರ್ ದಾಖಲಿಸಲು ವಿಳಂಬವಾಗುತ್ತಿದೆ.
ಕಾಯ್ದೆ ವಿಚಾರದಲ್ಲಿ ಸ್ಪಷ್ಟನೆ ಇಲ್ಲದ ಕಾರಣಕ್ಕೆ ಎಫ್ಐಆರ್ ದಾಖಲು ವಿಳಂಬವಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಇಂದು ಕೂಡ ಎಫ್ಐರ್ ದಾಖಲಾಗುವುದು ಅನುಮಾನ ಎನ್ನಲಾಗಿದೆ.
ಕಾಯ್ದೆಯಲ್ಲಿ ಸ್ಪಷ್ಟನೆ ಇಲ್ಲದ ಕಾರಣ ಕೇಂದ್ರ ಕಚೇರಿಯ ಅಭಿಪ್ರಾಯ ಕೇಳಿ ಲೋಕಾಯುಕ್ತ ಎಸ್ ಪಿ ಉದೇಶ್ ಪತ್ರ ಬರೆದಿದ್ದಾರೆ. BNSS ಕಾಯ್ದೆಯಡಿ ಎಫ್ ಐ ಆರ್ದಾಖಲಿಸಬೇಕಾ? ಅಥವಾ ಸಿಆರ್ ಪಿಸಿ, ಐಪಿಸಿ ಸೆಕ್ಷನ್ ಅಡಿ ಎಫ್ ಐ ಆರ್ ದಾಖಲಿಸಬೇಕಾ? ಎಂದು ಸ್ಪಷ್ಟನೆ ಕೊಡುವಂತೆ ಕೋರಿ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಬಂದ ಬಳಿಕ ಎಫ್ ಐ ಆರ್ ದಾಖಲು ಮಾಡುವ ಸಾಧ್ಯತೆ ಇದೆ.