alex Certify ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ʼಪೋಸ್ಟ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ʼಪೋಸ್ಟ್ʼ

ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಸ್ಟೇಟಸ್ ಸಾಮಾಜಿಕ ಮಾಧ್ಯಮದಲ್ಲಿ ಅಷ್ಟೇ ಅಲ್ಲದೇ ರಾಜಕೀಯ ವಲಯದಲ್ಲೂ ಕೋಲಾಹಲ ಎಬ್ಬಿಸಿದೆ. ಏಕೆಂದರೆ ಈ ಹಿಂದೆ ಬಿಜೆಪಿ ಅಭಿಮಾನಿಯಾಗಿದ್ದ ಅವರು ಇದೀಗ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಪೋಸ್ಟ್ ಹಾಕಿದ್ದಾರೆ.

ಹರಿಯಾಣ ಚುನಾವಣೆ 2024 ಹಿನ್ನೆಲೆಯಲ್ಲಿ ಸೆಹ್ವಾಗ್ ಕಾಂಗ್ರೆಸ್ ಅಭ್ಯರ್ಥಿ ಅನಿರುದ್ಧ ಚೌಧರಿ ಅವರ ರ್ಯಾಲಿಗಳು ಮತ್ತು ಪ್ರಚಾರದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಮತಯಂತ್ರದಲ್ಲಿ ಚೌಧರಿ ಹೆಸರಿನ ಮುಂದೆ ಬಟನ್ ಒತ್ತುತ್ತಿರುವಂತೆ ತೋರುವ ಇಮೇಜ್ ಕೂಡ ಹಂಚಿಕೊಂಡಿದ್ದಾರೆ.

2019 ರ ಚುನಾವಣೆಯಲ್ಲಿ ಸ್ಪರ್ಧಿಸಲು ಸೆಹ್ವಾಗ್‌ಗೆ ಬಿಜೆಪಿ ಟಿಕೆಟ್ ಆಫರ್ ನೀಡಿತ್ತು. ಇದರಿಂದ ವೀರೇಂದ್ರ ಸೆಹ್ವಾಗ್ ಬಿಜೆಪಿ ಬೆಂಬಲಿಗರು ಎಂದು ತಿಳಿಯಲಾಗಿತ್ತು. ಆದರೂ ಆ ವೇಳೆ ಸೆಹ್ವಾನ್ ಟಿಕೆಟ್ ಆಫರ್ ತಿರಸ್ಕರಿಸಿದ್ದರು. ಇದೀಗ ಕಾಂಗ್ರೆಸ್ ಪರ ಅವರ ಪೋಸ್ಟ್ ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ.

45 ವರ್ಷದ ಸೆಹ್ವಾಗ್ , ಕಳೆದ ವಾರ ತಮ್ಮ ಟ್ವೀಟ್‌ಗಳಲ್ಲಿ ಮೋದಿ ಸರ್ಕಾರವನ್ನು ಪ್ರಶ್ನಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ಎದುರಿಸಿದರು, ನಂತರ ಪೋಸ್ಟ್ ಡಿಲೀಟ್ ಮಾಡಿದರು. ಪಿಎಸ್‌ಯು ಬ್ಯಾಂಕ್‌ಗಳ ದೃಢತೆಯ ಬಗ್ಗೆ ಪ್ರಧಾನಿ ಮೋದಿ ಅವರ ಪೋಸ್ಟ್ ಟೀಕಿಸಿ ವಿರೋಧಿಸಿ ಪ್ರಶ್ನಿಸಿದ್ದರು.

— Roshan Rai (@RoshanKrRaii) September 24, 2024

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...