ಆರ್ ರವೀಂದ್ರ ನಿರ್ದೇಶನದ ಎಸ್.ಆರ್. ಸನತ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಅರಸು ಅವರ ಸಹ ನಿರ್ಮಾಣವಿರುವ ‘ಗೋಪಿಲೋಲ’ ಚಿತ್ರದ ಟ್ರೈಲರನ್ನು ಸುಕೃತಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, ನೋಡುಗರ ಗಮನ ಸೆಳೆದಿದೆ.
ಈ ಚಿತ್ರವನ್ನು ಸುಕೃತಿ ಚಿತ್ರಾಲಯ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದು ಮಂಜುನಾಥ್ ಅರಸು ಸೇರಿದಂತೆ ನಿಮಿಷಾ ಕೆ ಚಂದ್ರು, ಎಸ್ ನಾರಾಯಣ್, ಸಪ್ತಗಿರಿ, ಜಾಹ್ನವಿ, ಜೋಸೈಮನ್, ನಾಗೇಶ್ ಯಾದವ್, ಪದ್ಮಾ ವಾಸಂತಿ, ಸ್ವಾತಿ, ಡಿಂಗ್ರಿ ನಾಗರಾಜ್, ರೇಖಾದಾಸ್, ಎಸ್ ಹನುಮಂತೇಗೌಡ, ತಾರಾ ಬಳಗದಲ್ಲಿದ್ದಾರೆ. ಮಿದುನ್ ಅಶೋಕನ್ ಸಂಗೀತ ಸಂಯೋಜನೆ ನೀಡಿದ್ದು, ಕೆ ಎಂ ಪ್ರಕಾಶ್ ಸಂಕಲನ ಹಾಗೂ ಸೂರ್ಯಕಾಂತ್. ಎಚ್ ಛಾಯಾಗ್ರಹಣವಿದೆ.