BIG NEWS: ನಾನು ಡಿಸಿಪಿ ಮಗ ಎಂದು ಹೇಳಿ ಸೆಕ್ಯೂರಿಟಿ ಮೇಲೆ ಯುವಕನಿಂದ ಹಲ್ಲೆ; ಅಪಾರ್ಟ್ ಮೆಂಟ್ ಗೆ ಯುವತಿಯರೊಂದಿಗೆ ಬಂದ ವ್ಯಕ್ತಿಯಿಂದ ದಾಳಿ

ಬೆಂಗಳೂರು: ರಾಜ್ಯ ರಾಜದಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪುಂಡರ ಹುಚ್ಚಾಟ ಮಿತಿ ಮೀರುತ್ತಿದೆ. ಅಪಾರ್ಟ್ ಮೆಂಟ್ ಗೆ ಮಧ್ಯರಾತ್ರಿ ಬಂದ ಅಪರಿಚಿತ ಯುವಕನನ್ನು ಪ್ರಶ್ನೆ ಮಾಡಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್ ನನ್ನೇ ಮನಬಂದಂತೆ ಥಳಿಸಿ ಆತನ ಕಿವಿಯೇ ಕುವುಡಾಗುವಂತೆ ಹೊಡೆದಿರುವ ಘಟನೆ ಕುಂಬಳಗೋಡಿನಲ್ಲಿ ನಡೆದಿದೆ.

ಕುಂಬಳಗೋಡಿನ ಪ್ರಾವಿಡೆಂಟ್ ಸನ್ ವರ್ತ್ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿ 12 ಗಂಟೆ ವೇಳೆ ಅಪರಿಚಿತ ಯುವಕನೊಬ್ಬ ಇಬ್ಬರು ಯುವತಿಯರೊಂದಿಗೆ ಅಪಾರ್ಟ್ ಮೆಂಟ್ ಗೆ ಬಂದಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಪುನೀತ್ ಎಂಬುವವರು ಆತನನ್ನು ತಡೆದು, ರಾತ್ರಿ ಬಳಿಕ ಅಪರಿಚಿತ ವ್ಯಕ್ತಿಗಳಿಗೆ ಅಪಾರ್ಟ್ ಮೆಂಟ್ ಒಳಗೆ ಪ್ರವೇಶವಿಲ್ಲ. ಅಪಾರ್ಟ್ ಮೆಂಟ್ ಅಸೋಸಿಯೇಷನ್ ನಿಯಮದ ಪ್ರಕಾರ ಅಪರಿಚಿತರಿಗೆ ಮಧ್ಯರಾತ್ರಿ ಒಳಗೆ ಬಿಡುವಂತಿಲ್ಲ ಎಂದು ಹೇಳಿದ್ದಾರೆ.

ಸೆಕ್ಯೂರಿಟಿ ಒಳಬಿಡದಿರುವುದಕ್ಕೆ ಕೋಪಗೊಂಡ ಯುವಕ ನಾನು ಡಿಸಿಪಿ ಮಗ, ಸಿದ್ದರಾಮಯ್ಯ ನಮ್ಮ ಸಂಬಂಧಿ. ನಾನು ಲಾ ಓದುತ್ತಿದ್ದೇನೆ. ನಾಳೆ ನಿನಗೆ ಕೆಲಸ ಇರಬೇಕಾ ಬೇಡವಾ? ಎಂದು ಮನಬಂದಂತೆ ಥಳಿಸಿದ್ದಾನೆ. ಸೆಕ್ಯೂಟಿಯ ಕಿವಿ ಮೇಲೆಯೂ ಹೊಡೆದಿದ್ದು, ಪದೇ ಪದೇ ನಾನು ಡಿಸಿಪಿ ಮಗ ನನಗೆ ಒಳಗೆ ಬಿಡಲ್ವಾ? ಎಂದು ಥಳಿಸಿದ್ದಾನೆ. ಯುವಕನನ್ನು ವರುಣ್ ಎಂದು ಗುರುತಿಸಲಾಗಿದೆ.

ಯುವಕನ ಹಲ್ಲೆಗೆ ಸೆಕ್ಯೂರಿಟಿ ಗಾರ್ಡ್ ಪುನೀತ್ ಅವರ ಕಿವಿ ಪರದೆಗೆ ಏಟು ಬಿದ್ದಿದ್ದು, ಎರಡೂ ಕಿವಿಗಳು ಸರಿಯಾಗಿ ಕೇಳುತ್ತಿಲ್ಲ. ಯುವಕ ಜೀವ ಬೆದರಿಕೆ ಹಾಕಿ ಹೋಗಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾರೆ. ಕುಂಬಳಗೋಡು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read