alex Certify ಹಾಗಲಕಾಯಿಯನ್ನು ಪ್ರತಿದಿನ ಸೇವನೆ ಮಾಡಿದ್ರೆ ಸಿಗುತ್ತೆ ಅಚ್ಚರಿಯ ಫಲಿತಾಂಶ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಗಲಕಾಯಿಯನ್ನು ಪ್ರತಿದಿನ ಸೇವನೆ ಮಾಡಿದ್ರೆ ಸಿಗುತ್ತೆ ಅಚ್ಚರಿಯ ಫಲಿತಾಂಶ……!

ಹಾಗಲಕಾಯಿ ವಿಶಿಷ್ಟವಾದ ಕಹಿ ರುಚಿಗೆ ಹೆಸರುವಾಸಿಯಾಗಿದೆ. ಇದರಲ್ಲಿ ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ವಿವಿಧ ಪೋಷಕಾಂಶಗಳು ಸಮೃದ್ಧವಾಗಿವೆ. ಆದರೂ ಹಾಗಲಕಾಯಿಯನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಕಹಿಯಾಗಿದ್ದರೂ ಹತ್ತಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಾಗಲಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡಬೇಕು.

ರೋಗನಿರೋಧಕ ಶಕ್ತಿ ಹೆಚ್ಚಳ

ಹಾಗಲಕಾಯಿ ವಿಟಮಿನ್‌ಗಳ ಖಜಾನೆಯಿದ್ದಂತೆ. ವಿಟಮಿನ್ ಸಿ, ಫ್ಲೇವನಾಯ್ಡ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ಉತ್ಕರ್ಷಣ ನಿರೋಧಕಗಳು ಇದರಲ್ಲಿವೆ. ಈ ಪೋಷಕಾಂಶಗಳು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಮಳೆಗಾಲದಲ್ಲಿ ಪ್ರತಿದಿನ ಹಾಗಲಕಾಯಿಯನ್ನು ತಿನ್ನುವುದರಿಂದ ಸಾಂಕ್ರಾಮಿಕ ರೋಗಗಳ ಅಪಾಯ ಕಡಿಮೆಯಾಗುತ್ತದೆ.

ಕೂದಲಿನ ಆರೋಗ್ಯ

ವಿಟಮಿನ್ ಎ, ಸಿ ಮತ್ತು ಸತುವಿನಂತಹ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಹಾಗಲಕಾಯಿ ಕೂದಲು ಮತ್ತು ನೆತ್ತಿಯನ್ನು ಪೋಷಿಸುತ್ತದೆ. ಇದು ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಯಕೃತ್ತಿನ ಆರೋಗ್ಯ ಸುಧಾರಣೆ

ಹಾಗಲಕಾಯಿಯು ಡಿಟಾಕ್ಸ್ ಪ್ರಕ್ರಿಯೆಯನ್ನು ಉತ್ತೇಜಿಸುವ ಮೂಲಕ ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುತ್ತದೆ. ಇದರ ಗುಣಲಕ್ಷಣಗಳು ಯಕೃತ್ತಿನಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕರಿದು ವಸ್ತುಗಳ ಸೇವನೆಯಿಂದ ದಣಿದ ಯಕೃತ್ತನ್ನು ಹಾಗಲಕಾಯಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತದೆ.

ತೂಕ ಇಳಿಕೆ

ಹಾಗಲಕಾಯಿಯಲ್ಲಿ ಕ್ಯಾಲೋರಿ ಕಡಿಮೆ, ಆದರೆ ನಾರಿನಂಶ ಹೆಚ್ಚಿರುವುದರಿಂದ ಇದು ತೂಕ ನಿರ್ವಹಣೆಗೆ ಸಹಕಾರಿ. ಇದನ್ನು ತಿಂದ ನಂತರ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ.

ಆರೋಗ್ಯಕರ ಚರ್ಮ

ಹಾಗಲಕಾಯಿ ಎಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಕೂಡಿದೆ. ಇವು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ಹೆಚ್ಚಾಗುವ ಮೊಡವೆ ಮತ್ತು ಚರ್ಮದ ಸೋಂಕುಗಳ ವಿರುದ್ಧ ಹೋರಾಡುತ್ತದೆ.

ಜೀರ್ಣಕ್ರಿಯೆ ಸುಧಾರಣೆ

ಹಾಗಲಕಾಯಿಯಲ್ಲಿ ನಾರಿನಂಶ ಮತ್ತು ನೀರು ಅಧಿಕವಾಗಿದ್ದು, ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಹೊಟ್ಟೆ ಉಬ್ಬರಿಸುವಿಕೆ, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಾಮಾನ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ದೇಹವನ್ನು ಡಿಟಾಕ್ಸ್ ಮಾಡುತ್ತದೆ

ಹಾಗಲಕಾಯಿಯಲ್ಲಿ ಕ್ವಿನೈನ್ ಮತ್ತು ಸಪೋನಿನ್‌ನಂತಹ ಸಂಯುಕ್ತಗಳಿವೆ. ಇದು ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಯಕೃತ್ತನ್ನು ಆರೋಗ್ಯಕರವಾಗಿಸುತ್ತದೆ.

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...