ಅಕ್ಟೋಬರ್ ಮೂರರಂದು ತೆರೆ ಮೇಲೆ ಬರಲು ಸಜ್ಜಾಗಿರುವ ರಾಧಿಕಾ ಕುಮಾರಸ್ವಾಮಿ ಅಭಿನಯದ ‘ಭೈರಾದೇವಿ’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದರ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಟ್ರೈಲರ್ ಲಾಂಚ್ ಇವೆಂಟ್ ಕಾರ್ಯಕ್ರಮ ಇದೇ ಸೆಪ್ಟಂಬರ್ 21ರಂದು ಮಲ್ಲೇಶ್ವರಂ ಮಂತ್ರಿ ಮಾಲ್ ನಲ್ಲಿ ನಡೆಯಲಿದೆ. ಈ ಕುರಿತು ರಾಧಿಕಾ ಕುಮಾರಸ್ವಾಮಿ ತಮ್ಮ instagram ಖಾತೆಯಲ್ಲಿ ತಿಳಿಸಿದ್ದಾರೆ.
ಶ್ರೀ ಜೈ ನಿರ್ದೇಶನದ ಈ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಸೇರಿದಂತೆ ರಮೇಶ್ ಅರವಿಂದ್, ರಂಗಾಯಣ ರಘು, ರವಿಶಂಕರ್, ಅನುಪ್ರಭಾಕರ್, ಸ್ಕಂದ ಅಶೋಕ್, ಶಿವರಾಂ, ಸುಚೇಂದ್ರ ಪ್ರಸಾದ್, ಮಾಳವಿಕಾ ಅವಿನಾಶ್, ಹಾಗೂ ಪದ್ಮಜಾ ರಾವ್ ತೆರೆ ಹಂಚಿಕೊಂಡಿದ್ದು, ರಾಧಿಕಾ ಕುಮಾರಸ್ವಾಮಿ ಅವರೇ ನಿರ್ಮಾಣ ಮಾಡಿದ್ದಾರೆ. ಸಿ ರವಿಚಂದ್ರನ್ ಸಂಕಲನ, ವಾಲಿ ಛಾಯಾಗ್ರಹಣ, ಡಾಕ್ಟರ್ ರವಿವರ್ಮ ಸಾಹಸ ನಿರ್ದೇಶನ, ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿದೆ.