ಉತ್ತಮ ದಾಂಪತ್ಯದಲ್ಲಿ ರೊಮ್ಯಾನ್ಸ್ ಮಹತ್ವದ ಪಾತ್ರ ವಹಿಸುತ್ತದೆ. ಆದ್ರೆ ಕೆಲವೊಮ್ಮೆ ಮೂಡ್ ಸರಿಯಾಗಿರೋದಿಲ್ಲ. ಸಂಗಾತಿ ಜೊತೆ ರೊಮ್ಯಾನ್ಸ್, ಶಾರೀರಿಕ ಸಂಬಂಧ ಬೆಳೆಸಲು ಮನಸ್ಸಾಗೋದಿಲ್ಲ. ಇತ್ತೀಚೆಗೆ ನಡೆದ ಅಧ್ಯಯನವೊಂದು ಇದಕ್ಕೆ ಪರಿಹಾರವೇನು ಎಂಬುದನ್ನು ಹೇಳಿದೆ.
ರೊಮ್ಯಾನ್ಸ್ ಹಾಗೂ ಬಾಡಿ ಮಸಾಜ್ ನಡುವೆ ಅನನ್ಯ ಸಂಬಂಧವಿದೆ. ಬಾಡಿ ಮಸಾಜ್ ಮಾಡಿದ್ರೆ ಶಾರೀರಿಕ ಸಂಬಂಧ ಬೆಳೆಸಲು ಮೂಡ್ ಬರುತ್ತೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಒಮಿಕ್ರಾನ್ ನಿಂದ ಮಕ್ಕಳ ರಕ್ಷಣೆ ಹೀಗಿರಲಿ
ವಿಶ್ವವಿದ್ಯಾನಿಲಯವೊಂದು ಈ ಬಗ್ಗೆ ಅಧ್ಯಯನ ನಡೆಸಿದೆ. ಸಾಮಾನ್ಯವಾಗಿ ಬಾಡಿ ಮಸಾಜ್ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಬಾಡಿ ಮಸಾಜ್ ಒತ್ತಡ ಕಡಿಮೆ ಮಾಡಿ ಹಿತ ನೀಡುತ್ತದೆ. ಹಾಗೆ ಬಾಡಿ ಮಸಾಜ್ ಶಾರೀರಿಕ ಸಂಬಂಧದ ಮೇಲೂ ಮಹತ್ವದ ಪರಿಣಾಮ ಬೀರುತ್ತದೆ.
ಅಧ್ಯಯನದ ಪ್ರಕಾರ ಸಂಗಾತಿಗಳು ಪರಸ್ಪರ ಬಾಡಿ ಮಸಾಜ್ ಮಾಡಿಕೊಳ್ಳುವುದರಿಂದ ಭಾವನಾತ್ಮಕವಾಗಿ ಇಬ್ಬರೂ ಮತ್ತಷ್ಟು ಹತ್ತಿರವಾಗ್ತಾರಂತೆ. ಒತ್ತಡ, ಕಿರಿಕಿರಿ ಜೊತೆಗೆ ದೈಹಿಕವಾಗಿ ಕಾಡುವ ನೋವುಗಳು ಕಡಿಮೆಯಾಗಿ ಶಾರೀರಿಕ ಸಂಬಂಧ ಬೆಳೆಸಲು ಮನಸ್ಸು ಉತ್ಸುಕವಾಗುತ್ತದೆಯಂತೆ. ವಿಶ್ವವಿದ್ಯಾನಿಲಯ 38 ಜೋಡಿಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿತ್ತು.