ಪಾಕಶಾಲೆಯ ನಾವೀನ್ಯತೆಯ ಉತ್ಸಾಹದೊಂದಿಗೆ ಮುಂದುವರಿಯುತ್ತಾ, MAGGI ಹ್ಯಾಪಿ ಬೌಲ್ ಅನ್ನು ಅನಾವರಣಗೊಳಿಸಿದೆ. ಹೊಸ ಉತ್ಪನ್ನವು ತನ್ನ ಅದಮ್ಯ ರುಚಿಯನ್ನು ಅಟ್ಟಾದೊಂದಿಗೆ ಸಂಯೋಜಿಸುತ್ತದೆ ಮತ್ತು ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ A ಮತ್ತು ನಾರಿನಂಶದ ಮೂಲವಾಗಿದೆ. ‘ಯಮ್ಮಿ ಮಸಾಲಾ’ ಮತ್ತು ‘ಟ್ವಿಸ್ಟಿ ಟೊಮೇಟೊ’ ಎಂಬ ಎರಡು ಅದ್ಭುತ ರುಚಿಗಳಲ್ಲಿ ಲಭ್ಯವಿರುವ ಈ ಹೊಸ ಕೊಡುಗೆಯನ್ನು ಹೊಸತನದ ಮೂಲಕ ಉತ್ತಮ ರುಚಿಯನ್ನು ನೀಡಲು MAGGI ಯ ಬದ್ಧತೆಯನ್ನು ಸಾಕಾರಗೊಳಿಸುವುದರ ಜೊತೆಗೆ ಯುವಸ್ವಾದಿಗಳನ್ನು ಸಂತಸಪಡಿಸುವುದಕ್ಕಾಗಿ ತಯಾರಿಸಲಾಗಿದೆ.
ನೆಸ್ಲೆ ಇಂಡಿಯಾದ ಫುಡ್ಸ್ ಬಿಸಿನೆಸ್‍ನ ನಿರ್ದೇಶಕರಾದ ಶ್ರೀ. ರಜತ್ ಜೈನ್ ಅವರು ಹೊಸ ಉತ್ಪನ್ನದ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಳ್ಳುತ್ತಾ ಹೀಗೆಂದರು, “MAGGI ಯಲ್ಲಿ, ನಾವು ತಯಾರಿಸುವ ಆಹಾರದ ಬಗ್ಗೆ ನಮಗೆ ಅತೀವ ಉತ್ಸಾಹವಿದೆ ಮತ್ತು ನಮ್ಮ ಹೃದಯದಲ್ಲಿ MAGGI ಹ್ಯಾಪಿ ಬೌಲ್ ನಿಜವಾಗಿಯೂ ವಿಶೇಷ ಸ್ಥಾನವನ್ನು ಹೊಂದಿದೆ. ಇದು ಕುಟುಂಬದ ಪ್ರತಿಯೊಬ್ಬರಿಗೂ ಪ್ರಿಯವಾದ ಉತ್ಪನ್ನಗಳನ್ನು ಸೃಷ್ಟಿಸುವ MAGGI ಪರಂಪರೆಯನ್ನು ಮುಂದುವರಿಸುವ ಮತ್ತು ಅವರಿಗಾಗಿ ಹೆಚ್ಚಿನ ಆಯ್ಕೆಗಳನ್ನು ಒದಗಿಸುವ ಭರವಸೆಯನ್ನು ನೀಡುತ್ತದೆ. MAGGI ಹ್ಯಾಪಿ ಬೌಲ್ ಮಕ್ಕಳಿಗಾಗಿನ ನಮ್ಮ ಕೊಡುಗೆಯಾಗಿದೆ ಮತ್ತು ಅಮ್ಮಂದಿರಿಗಾಗಿನ ಉಡುಗೊರೆಯಾಗಿದೆ, ಪ್ರತಿ ಬೈಟ್‍ನಲ್ಲೂ ಸಂತೋಷಮಯ ಸರಳತೆಯನ್ನು ನೀಡುತ್ತದೆ.”
ಈ ಬಿಡುಗಡೆಯನ್ನು ಬೆಂಬಲಿಸುವುದಕ್ಕಾಗಿ, MAGGI ಪ್ರಮುಖ ನಗರಗಳಾದ್ಯಂತ ಟಿವಿ, ಡಿಜಿಟಲ್ ಮಾಧ್ಯಮ, ಮುದ್ರಣ ಮತ್ತು ಹೊರಾಂಗಣ ಜಾಹೀರಾತುಗಳಿಗೆ ವ್ಯಾಪಿಸಿರುವ ಸಮಗ್ರ ಮಾರುಕಟ್ಟೆ ಪ್ರಚಾರವನ್ನು ಹೊರತಂದಿದೆ. ಈ ಅಭಿಯಾನವು ಉತ್ತಮ ಅಭಿರುಚಿ ಮತ್ತು ಒಳ್ಳೆಯತನದ ಉಭಯ ಆಕರ್ಷಣೆಯನ್ನು ಹೈಲೈಟ್ ಮಾಡುವ ಮೂಲಕ, ಹ್ಯಾಪಿ ಬೌಲ್ ಅನ್ನು ಫ್ಯಾಮಿಲಿ ಟೇಬಲ್‍ಗಳಲ್ಲಿ ಹೊಸ ನೆಚ್ಚಿನ ಆದ್ಯತೆಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.
TVC ಯನ್ನು ನೀವು ಇಲ್ಲಿ: New Maggi Happy Bowl | Bacho ka apna bowl – YouTube ವೀಕ್ಷಿಸಬಹುದು.