ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಗಲಭೆ ಪ್ರಕರಣ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಇದು ಕಾಂಗ್ರೆಸ್ ಪ್ರಾಯೋಜಿಕತ್ವದ ಗಲಾಟೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ಕುಮಾರಸ್ವಾಮಿಯವರೇ ಗಲಭೆ ಮಾಡಿಸಿರಬಹುದಲ್ಲ? ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಹೆಚ್.ಡಿ.ಕುಮಾರಸ್ವಾಮಿಯೇ ನಾಗಮಂಗಲ ಗಲಭೆ ಮಾದಿಸಿರಬಹುದು. ಕುಮಾರಸ್ವಾಮಿ ಆರೋಪದಂತೆ ನನ್ನದೂ ಆರೋಪ. ನಾನೂ ಕೂಡ ಅವರ ಮೇಲೆ ಆರೋಪ ಮಡಬಹುದಲ್ಲ ಎಂದು ಟಾಂಗ್ ನೀಡಿದರು.
ಪ್ರತಿ ವಾರ ಅವರು ಬರ್ತಾರೆ, ಹಾಗೇ ಗಲಾತೆಯನ್ನೂ ಮಡಿಸಿರಬಹುದು. ಮುಸ್ಲೀಮನಾಗಿ ಹುಟ್ಟುವೆ ಎಂದು ಹೇಳಿದ್ದವನು ನಾನಲ್ಲ. ಕುಮಾರಸ್ವಾಮಿ ನಿತ್ಯ ಒಂದೊಂದು ಹೇಳಿಕೆ ಕೊಡ್ತಾರೆ. ಗಲಭೆಗಳಾದಾಗ ಹೆಚ್.ಡಿ.ಕೆ ಯಾವಯಾವ ಹೇಳಿಕೆಗಳನ್ನು ಕೊಟ್ಟಿದ್ರು, ಅಮಿತ್ ಶಾ, ಮೋದಿ ವಿರುದ್ಧ ಕಿಡಿಕಾರಿದ್ದರು. ಈಗ ಯಾವ ಹೇಳಿಕೆ ಕೊಡುತ್ತಿದ್ದಾರೆ ಎಲ್ಲವೂ ಗೊತ್ತು. ಹತಾಶೆಯಿಂದಾಗಿ ಹೆಚ್.ಡಿ.ಕುಮಾರಸ್ವಾಮಿಯವರೇ ಗಲಭೆ ಮಾಡಿಸಿರಬಹುದು ಎಂದು ಹೇಳಿದ್ದಾರೆ.

 
			 
		 
		 
		 
		 Loading ...
 Loading ... 
		 
		 
		