alex Certify ‘ಗಣಪತಿ ಬಪ್ಪಾ ಮೋರಿಯಾ’ ಎಂದು ಕೂಗುವುದೇಕೆ ? ಇಲ್ಲಿದೆ ಇದರ ಇಂಟರೆಸ್ಟಿಂಗ್ ಕಹಾನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗಣಪತಿ ಬಪ್ಪಾ ಮೋರಿಯಾ’ ಎಂದು ಕೂಗುವುದೇಕೆ ? ಇಲ್ಲಿದೆ ಇದರ ಇಂಟರೆಸ್ಟಿಂಗ್ ಕಹಾನಿ….!

ನವದೆಹಲಿ : ವಿನಾಯಕ ಚತುರ್ಥಿ ಆಚರಣೆಯ ಸಮಯದಲ್ಲಿ ‘ಗಣಪತಿ ಬಪ್ಪ ಮೋರಿಯಾ’ ಪಠಿಸಲಾಗುತ್ತದೆ. ಆದರೆ ಹೆಚ್ಚಿನ ಜನರಿಗೆ ‘ಮೋರಿಯಾ’ ಎಂಬ ಪದದ ಅರ್ಥ ತಿಳಿದಿಲ್ಲ . ‘ಮೋರಿಯಾ’ ಎಂಬ ಪದವು ಹೇಗೆ ಘೋಷಣೆಯಾಯಿತು? ಆ ಪದದ ಅರ್ಥವೇನು? ಇದರ ಹಿಂದಿನ ನಿಜವಾದ ಕಥೆ ಏನು ಎಂದು ತಿಳಿಯೋಣ.

ಮೋರಿಯಾ ಮೂಲ ಕಥೆ

15 ನೇ ಶತಮಾನದಲ್ಲಿ ‘ಮೋರಿಯಾ ಗೋಸಾವಿ’ ಎಂಬ ಸಂತನಿದ್ದನು. ಅವರು ಮಹಾರಾಷ್ಟ್ರದ ಪುಣೆಯಿಂದ 21 ಕಿ.ಮೀ ದೂರದಲ್ಲಿ ವಾಸವಿದ್ದರು. ಅವರು ದೂರದಲ್ಲಿರುವ ಚಿಂಚ್ವಾಡಿ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದರು.
ಅವರು ಗಣಪತಿಯ ಕಟ್ಟಾ ಭಕ್ತರಾಗಿದ್ದರು. ಗಣೇಶನನ್ನು ಪೂಜಿಸಲು ಅವರು ಪ್ರತಿದಿನ ಚಿಂಚ್ವಾಡಿಯಿಂದ ಮೊರೆಗಾಂವ್ ಗೆ ನಡೆದುಕೊಂಡು ಹೋಗುತ್ತಿದ್ದರು. ಒಂದು ದಿನ, ಮೋರಿಯಾ ಮಲಗಿದ್ದಾಗ, ಗಣೇಶನು ಕನಸಿನಲ್ಲಿ ಕಾಣಿಸಿಕೊಂಡು ತನ್ನ ವಿಗ್ರಹವು ಹತ್ತಿರದ ನದಿಯಲ್ಲಿದೆ ಮತ್ತು ಅದನ್ನು ತಂದು ಪ್ರತಿಷ್ಠಾಪಿಸುವಂತೆ ಕೇಳಿದನು. ಗಣಪತಿ ತನ್ನ ಕನಸಿನಲ್ಲಿ ಹೇಳಿದ್ದು ನಿಜವೇ ಅಥವಾ ಅಲ್ಲವೇ ಎಂದು ತಕ್ಷಣ ಕಂಡುಹಿಡಿಯಲು ಮೋರಿಯಾ ನದಿಗೆ ಹೋದನು. ತನ್ನ ಕನಸಿನಲ್ಲಿ, ಗಣಪತಿ ಹೇಳಿದಂತೆ, ಮೋರಿಯಾ ನದಿಯಲ್ಲಿ ಗಣೇಶನ ವಿಗ್ರಹವನ್ನು ನೋಡಿದ್ದಾರೆ.

ಈ ವಿಷಯ ತಿಳಿದು ಸ್ಥಳೀಯರು ಆಶ್ಚರ್ಯಚಕಿತರಾದರು. ಮೋರಿಯಾ ಗೋಸಾವಿ ಮಹಾನ್ ವ್ಯಕ್ತಿ..ಗಣೇಶನು ಆತನ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದರೆ ಆತ ಎಷ್ಟು ವ್ಯಕ್ತಿ ಆಗಿರಕಿಲ್ಲ ಎಂದು ಆತನ ದರ್ಶನಕ್ಕಾಗಿ ಹಲವಾರು ಜನರು ಬಂದರು.

ಅವರು ಸಂತನ ಪಾದಗಳನ್ನು ಮುಟ್ಟಿ ಮೋರಿಯಾ ಎಂದು ಹೇಳಲು ಪ್ರಾರಂಭಿಸಿದನು. ಮೋರಿಯಾ ನದಿಯಿಂದ ತಂದ ಗಣಪತಿ ವಿಗ್ರಹವನ್ನು ತಂದು ದೇವಾಲಯವನ್ನು ನಿರ್ಮಿಸಿದನು. ಮೋರಿಯಾ ಮಹಾನ್ಭ ಕ್ತನಾದಾಗಿನಿಂದ, ಮೋರ್ಯ ಗೋಸಾವಿಯ ಹೆಸರು ಅಂದಿನಿಂದ ಗಣಪತಿ ಹಬ್ಬಗಳ ಒಂದು ಭಾಗವಾಗಿದೆ. ಹಾಗಾಗಿ ಗಣಪತಿ ಬಿಡುವಾಗ ಗಣಪತಿ ಬಿಡುವಾಗ ಗಣಪತಿ ಬಪ್ಪಾ ಮೋರಿಯಾ ಎಂದು ಭಕ್ತರು ಘೋಷಣೆ ಕೂಗುತ್ತಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...