ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಅಕ್ರಮ ಪ್ರಕರಣ ಸಂಬಂಧ ಮುಡಾದ ಮತ್ತೊಂದು ಎಡವಟ್ಟು ಬಯಲಾಗಿದೆ.
ಮುಡಾ ನಿವೇಶನ ಖಾತೆ ಮಾಡಿ ಕೊಡುವುದಾಗಿ ಬರೆದ ಪತ್ರ ಬಹಿರಂಗವಾಗಿದ್ದು, ಪತ್ರದಲ್ಲಿ ಸಿಎಂ ಪತ್ನಿ ಪಾರ್ವತಿ ಅವರ ಬದಲಾಗಿ ಬೇರೆಯವರ ಸಹಿ ಇರುವುದು ಕಂಡುಬಂದಿದೆ. ಮಾತ್ರವಲ್ಲ, ಸಿಎಂ ಪತ್ನಿ ಕೇಳಿದ್ದು 13 ಸೈಟ್ ಆದರೆ ಮುಡಾ ನೀಡಿರುವುದು 14 ಸೈಟ್ ಗಳು ಎಂದು ಹೇಳಲಾಗುತ್ತಿದೆ.
ಸಿಎಂ ಪತ್ನಿ ಪಾರ್ವತಿ ಒಟ್ಟು 13 ನಿವೇಶನಗಳ ಖಾತೆ ನೋಂದಣಿ ಕೋರಿ 2022 ಜನವರಿ 1ರಂದು ಪತ್ರ ಬರೆದಿದ್ದರು. ಆ ಪತ್ರಕ್ಕೆ ಪಾರ್ವತಿ ಅವರ ಬದಲು ಮುಖ್ಯಮಂತ್ರಿಗಳ ಖಾಸಗಿ ಆಪ್ತ ಸಹಾಯಕ ಎಸ್.ಜಿ.ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್ ಸಹಿ ಹಾಕಿದ್ದಾರೆ. ಅರ್ಜಿದಾರರ ಬದಲು ಬೇರೆಯವರು ಸಹಿ ಮಾಡಲು ಅವಕಾಶವಿಲ್ಲದಿದ್ದರೂ ಸಿಎಂ ಆಪ್ತ ಸಹಾಯಕ ಸಿಹಿ ಮಾಡಿರುವುದು ಗೊತ್ತಿದ್ದರೂ ಅಧಿಕಾರಿಗಳು ನಿವೇಶ ಖಾತೆ ಮಾಡಿದ್ದಾರೆ.
ಅಲ್ಲದೇ ಮಂಜೂರಾಗಿರುವುದು 13 ನಿವೇಶನಗಳು. ಆದರೆ 14 ನಿವೇಶನಗಳ ಖಾತೆ ಮಾಡಿ ಕೊಡಲಾಗಿದೆ ಎಂದು ತಿಳಿದುಬಂದಿದೆ.