BREAKING : ಬೆಂಗಳೂರಲ್ಲಿ ಕನ್ನಡದಲ್ಲಿ ಮಾತನಾಡಿದ್ದಕ್ಕೆ ವ್ಯಕ್ತಿ ಮೇಲೆ ಯುಪಿ ಗ್ಯಾಂಗ್ ನಿಂದ ಮಾರಣಾಂತಿಕ ಹಲ್ಲೆ.!

ಆನೇಕಲ್: ಕರ್ನಾಟಕದಲ್ಲಿ ಕನ್ನಡಿಗರಿಗೇ ರಕ್ಷಣೆ ಇಲ್ಲವೇ ಎಂಬ ಆತಂಕ ಮೂಡುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ನೆಲಸಿರುವ ಹಲವರು ಕನ್ನಡಿಗರ ಮೇಲೆಯೇ ದಬ್ಬಾಳಿಕೆ, ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದು ಕನ್ನಡಿಗರನ್ನು ಆತಂಕಕ್ಕೀಡು ಮಾಡುತ್ತಿದೆ.

ಕನ್ನಡದಲ್ಲಿ ಮಾತನಾಡಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಯುಪಿ ಗ್ಯಾಂಗ್ ಕಾರ್ಮಿಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಲ್ಲಿ ನಡೆದಿದೆ.

40 ವರ್ಷದ ಶಿವಲಿಂಗ ಹಲ್ಲೆಗೊಳಗಾಗಿರುವ ವ್ಯಕ್ತಿ. ಮಗ್ಗದ ಕಾರ್ಖಾನೆಯಲ್ಲಿ ಶಿವಲಿಂಗ ಎಂಬುವವರು ಕೆಲಸ ಮಾಡುತ್ತಿದ್ದರು. ಉತ್ತರ ಪ್ರದೇಶ ಮೂಲದ ಗುಂಪೊಂದು ಶಿವಲಿಂಗ ಅವರಿಗೆ ಹಿಂದಿಯಲ್ಲಿ ಮಾತನಾಡುವಂತೆ ಪ್ರತಿದಿನ ಕಿರುಕುಳ ನೀಡುತ್ತಿತ್ತಂತೆ. ಕನ್ನಡದಲ್ಲಿ ಮಾತನಾಡಬಾರದು ಹಿಂದಿಯಲ್ಲಿ ಮಾತನಾಡಬೇಕು ಎಂದು ಆವಾಜ್ ಹಾಕುತ್ತಿದ್ದರಂತೆ.

ಕನ್ನಡದಲ್ಲಿ ಮಾತನಾಡಿದ್ದಕ್ಕೆ ಇದೀಗ ಯುವಕರು ಶಿವಲಿಂಗ ಅವರನ್ನು ರಾಡ್ ಹಾಗೂ ಮಗ್ಗದ ವಸ್ತುಗಳಿಂದ ಥಳಿಸಿದ್ದಾರೆ. ಶಿವಲಿಂಗ ಅವರ ತಲೆಗೆ ಹೊಡೆದಿದ್ದು, ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ.

ಕನ್ನಡದಲ್ಲಿ ಮಾತನಾಡಿದ್ದಕ್ಕೆ ಯುಪಿ ಗ್ಯಾಂಗ್ ಮಾರಣಂತಿಕ ಹಲ್ಲೆ ನಡೆಸಿದ್ದು, ಕರ್ನಾಟಕದಲ್ಲಿ ಕನ್ನಡಿಗರಿಗೇ ರಕ್ಷಣೆ ಇಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read