HomeEntertainment'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರಕ್ಕೆ ಫಿದಾ ಆದ ಸಿನಿ ಪ್ರೇಕ್ಷಕ

‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕೆ ಫಿದಾ ಆದ ಸಿನಿ ಪ್ರೇಕ್ಷಕ

ಸೆಪ್ಟಂಬರ್ 5 ಶಿಕ್ಷಕರ ದಿನಾಚರಣೆಯಂದು ಬಿಡುಗಡೆಯಾಗಿದ್ದ ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರ ಪ್ರೇಕ್ಷಕರ ಗಮನ ಸೆಳೆದಿದ್ದು, ರಾಜ್ಯದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ಬರುವ ಹಾಡುಗಳು ಹಾಗೂ ಒಂದರ ಮೇಲೊಂದು ತಿರುವುಗಳು ಪ್ರೇಕ್ಷಕರ ಮನ ಮುಟ್ಟಿದೆ.

ಈ ಚಿತ್ರವನ್ನು ಪರಮ್ ವಾ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಜಿಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದು, ವಿಹಾನ್, ಅಂಕಿತ ಅಮರ್ ಮತ್ತು ಮಯೂರಿ ನಟರಾಜ ಸೇರಿದಂತೆ ಗಿರಿಜಾ ಶೆಟ್ಟರ್, ಸಲ್ಮಿನ್ ಶೆರಿಫ್, ಶಂಕರ್ ಮೂರ್ತಿ ಎಸ್.ಆರ್., ರಕ್ಷಿತ್ ಕೌಪ್, ದವನ ಧನರಾಜ್, ಆದಿತ್ಯ ಬಿ ಪೂಜಾರ್, ಅನಿರುದ್ಧ್ ಭಟ್, ದಾಮಿನಿ ಧನರಾಜ್ ಬಣ್ಣ ಹಚ್ಚಿದ್ದಾರೆ. ಗಗನ್ ಬದರಿಯಾ ಸಂಗೀತ ಸಂಯೋಜನೆ ನೀಡಿದ್ದು, ರಕ್ಷಿತ್ ಕೌಪ್ ಸಂಕಲನ, ಶ್ರೀವತ್ಸನ್ ಸೆಲ್ವರಾಜನ್  ಛಾಯಾಗ್ರಹಣ ಹಾಗೂ ದೀಕ್ಷಿತ್ ಕುಮಾರ್ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular