ಕೊಪ್ಪಳ: ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆ ಉದ್ವಿಗ್ನ ಪರಿಸ್ಥಿತಿ ತಲುಪುವುದನ್ನು ತಪ್ಪಿಸುವ ಉದ್ದೇಶದಿಂದ ಪೊಲೀಸರೇ ಮುಂಜಾಗ್ರತೆ ಕ್ರಮವಾಗಿ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದಾರೆ.
ಕಾರಟಗಿಯ ನಾಲ್ಕನೇ ವಾರ್ಡ್ ನಲ್ಲಿ ಶನಿವಾರ ಬೆಳಗ್ಗೆ ಗಣೇಶ ಮೂರ್ತಿ ಮೆರವಣಿಗೆ ಮಾಡುವ ಬಗ್ಗೆ ಎರಡು ಸಮಿತಿಗಳ ನಡುವೆ ವಿವಾದ ಉಂಟಾಗಿ ಎರಡು ಗುಂಪುಗಳ ಯುವಕರು ಬಡಿಗೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಹಿರಿಯರ ಮನವಿ ಮೇರೆಗೆ ಪೊಲೀಸರು ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಪೂಜೆಗೆ ಅನುಮತಿ ನೀಡಿದ್ದು, ವಿಸರ್ಜೆ ಸಂದರ್ಭದಲ್ಲಿ ಯುವಕರ ಗುಂಪು ಮತ್ತೆ ಜಗಳ ಮಾಡಿಕೊಳ್ಳಬಹುದೆಂದು ಮುಂಜಾಗ್ರತೆ ಕ್ರಮದಿಂದ ಪೊಲೀಸರೇ ರಾತ್ರಿ ವೇಳೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದ್ದಾರೆ.
ಗುಂಪುಗಳ ನಡುವಿನ ಗಲಭೆ ತಡೆಯುವ ಉದ್ದೇಶದಿಂದ ರಾತ್ರಿ ಗಂಟೆಯೊಳಗೆ ಧಾರ್ಮಿಕ ವಿಧಾನಗಳಂತೆ ಗಣಪತಿ ವಿಸರ್ಜನೆ ಮಾಡಲಾಗಿದೆ.