ಸಿನಿ ಪ್ರೇಮಿಗಳನ್ನು ರಂಜಿಸಲು ಮತ್ತೊಂದು ಆಕ್ಷನ್ ಥ್ರಿಲ್ಲರ್ ಚಲನಚಿತ್ರವು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಹೌದು. ನಟ ದುನಿಯಾ ವಿಜಯ್ ಅಭಿನಯದ ಇತ್ತೀಚೆಗೆ ತೆರೆಕಂಡ ‘ಭೀಮ’ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿದೆ. ಡ್ರಗ್ಸ್ ವಿರುದ್ಧ ಸಮರ ಸಾರುವ ಈ ಸಿನಿಮಾ ಸಿನಿಪ್ರೇಕ್ಷಕ ಗಮನ ಸೆಳೆಯುತ್ತಿದೆ.
ದುನಿಯಾ ವಿಜಯ್ ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿರುವ ಈ ಚಿತ್ರವನ್ನು ಕೃಷ್ಣ ಕ್ರಿಯೇಶನ್ಸ್ ಮತ್ತು ಜಗದೀಶ ಫಿಲಂಸ್ ಬ್ಯಾನರ್ ನಲ್ಲಿ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಣ ಮಾಡಿದ್ದು, ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ದುನಿಯಾ ವಿಜಯ್ ಸೇರಿದಂತೆ ಅಶ್ವಿನಿ, ಪ್ರಿಯಾ ಶತಮರ್ಶನ್, ಕಲ್ಯಾಣಿ ರಾಜು, ಕಾಕ್ರೋಚ್ ಸುಧಿ, ಅಚ್ಯುತ್ ಕುಮಾರ್, ಗೋಪಾಲ ಕೃಷ್ಣ ದೇಶಪಾಂಡೆ ಬಣ್ಣ ಹಚ್ಚಿದ್ದಾರೆ. ಚೇತನ್ ಡಿಸೋಜಾ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, ಶಿವಸೇನಾ ಅವರ ಛಾಯಾಗ್ರಹಣವಿದೆ.