ಹೈದರಾಬಾದ್ : ಆಘಾತಕಾರಿ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ. ಸೊಳ್ಳೆಗಳನ್ನು ತಡೆಯುವ ಕಾಯಿಲ್ ನಿಂದ ದಾರುಣ ಘಟನೆ ನಡೆದಿದೆ.
ವಿಮಲಾ ಕುಕಟ್ಪಲ್ಲಿಯಲ್ಲಿರುವ ಶಿವಾನಂದ ಪುನರ್ವಸತಿ ಕೇಂದ್ರದಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಹೆತ್ತವರೊಂದಿಗೆ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದಾರೆ.
ಕಳೆದ ಶುಕ್ರವಾರ (ಆಗಸ್ಟ್ 30) ರಾತ್ರಿ, ಉನ್ನತ ಶಿಕ್ಷಣಕ್ಕಾಗಿ ತನ್ನ ಹುಟ್ಟೂರಾದ ಬಾಪಟ್ಲಾದಿಂದ ಬಂದಿದ್ದ ಕಿರಿಯ ಸಹೋದರ ತನ್ನ ಹೆತ್ತವರೊಂದಿಗೆ ಮಲಗಿದ್ದನು. ಸೊಳ್ಳೆ ಓಡಿಸಲೆಂದು ಸೊಳ್ಳೆ ಕಾಯಿಲ್ ಹಚ್ಚಿಟ್ಟು ಮಲಗಿದ್ದರು.
ಈ ವೇಳೆ ಸೊಳ್ಳೆ ಕಾಯಿಲ್ ನ ಕಿಡಿ ಅಕ್ಕ ಪಕ್ಕದ ವಸ್ತುಗಳಿಗೆ ತಗುಲಿ ನಂತರ ಬೆಂಕಿ ಅಡುಗೆಮನೆಯ ಸಿಲಿಂಡರ್ ಗೆ ಹರಡಿತು. ಸಿಲಿಂಡರ್ ಸ್ಫೋಟಗೊಂಡ ನಂತರ ಬೆಂಕಿ ಎಲ್ಲಾ ಮನೆಗಳಿಗೆ ಹರಡಿತು. ಅಭಿಷೇಕ್ (27) ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ತಾಯಿ ದೀನಮ್ಮ ಅವರಿಗೆ ಶೇ.35ರಷ್ಟು ಸುಟ್ಟ ಗಾಯಗಳಾಗಿದ್ದು, ರಾಮದೇವ್ ರಾವ್ ಆಸ್ಪತ್ರೆಯ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.