ಹುಟ್ಟು ಹಬ್ಬದ ಸಂಭ್ರಮದಲ್ಲಿ ಕ್ರಿಕೆಟಿಗ ಇಶಾಂತ್ ಶರ್ಮಾ

ಭಾರತದ ಎತ್ತರ ನಿಲುವಿನ ವೇಗದ ಬೌಲರ್ ಇಶಾಂತ್ ಶರ್ಮಾ ಇಂದು ತಮ್ಮ 36ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಇಶಾಂತ್ ಶರ್ಮಾ 2007 ಮೇ  25 ರಂದು ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಟೆಸ್ಟ್ ಪಂದ್ಯದ ಮೂಲಕ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಬಳಿಕ 2007 ಜೂನ್ 29 ರಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆದ ಏಕದಿನ ಸರಣಿಯಲ್ಲಿ ಇವರಿಗೆ ಅವಕಾಶ ಸಿಕ್ಕಿತು. ಟೆಸ್ಟ್ ಕ್ರಿಕೆಟ್ ನಲ್ಲಿ 105 ಪಂದ್ಯಗಳನ್ನಾಡಿರುವ ಇವರು 311 ವಿಕೆಟ್ ಕಬಳಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್ ನಲ್ಲಿ 80  ಪಂದ್ಯಗಳನ್ನಾಡಿದ್ದು,  115 ವಿಕೆಟ್ ಪಡೆದುಕೊಂಡಿದ್ದಾರೆ.

ದೆಹಲಿ ಮೂಲದವರಾದ ಇವರು ಐಪಿಎಲ್ ನಲ್ಲಿ ಇದುವರೆಗೂ ಸುಮಾರು ಆರು ತಂಡಗಳಲ್ಲಿ ಬದಲಾವಣೆಯಾಗಿದ್ದಾರೆ. ಇಂದು ಹಲವಾರು ಹಿರಿಯ ಹಾಗೂ ಯುವ ಕ್ರಿಕೆಟಿಗರು ಇಶಾಂತ್ ಶರ್ಮಾ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read