alex Certify ‘ಗೌರಿ ಪುತ್ರ’ ಗಣೇಶನಿಗಿರುವ ಪ್ರಮುಖ ಹೆಸರುಗಳ ಅರ್ಥವೇನು ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೌರಿ ಪುತ್ರ’ ಗಣೇಶನಿಗಿರುವ ಪ್ರಮುಖ ಹೆಸರುಗಳ ಅರ್ಥವೇನು ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ವಿವರ

ಗೌರಿ ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು ವಿಷ್ನೇಶ್ವರನ ಪೂಜೆಗೆ ಈಗಾಗಲೇ ಗಣೇಶ ಮೂರ್ತಿಗಳು ನಗರಕ್ಕೆ ಲಗ್ಗೆ ಇಟ್ಟಿವೆ. ವಿಘ್ನ ನಿವಾರಕನ ಪೂಜಿಸಲು ಗಜಮುಖನ ಭಕ್ತರು ಸಿದ್ಧರಿದ್ದು ಹಬ್ಬದ ದಿನಕ್ಕಾಗಿ ಕಾಯುತ್ತಿದ್ದಾರೆ. ಯಾವುದೇ ಶುಭ ಕಾರ್ಯಗಳಿಗೆ ಪ್ರಥಮವಾಗಿ ಪೂಜಿಸಲ್ಪಡುವ ಗಣೇಶನನ್ನು ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಗೌರಿಪುತ್ರನಿಗೆ ಇರುವ ಪ್ರಮುಖ ಹೆಸರುಗಳ ಅರ್ಥವೇನು ಎಂಬುದನ್ನ ಇಲ್ಲಿ ವಿವರಿಸಲಾಗಿದೆ.

ವಕ್ರತುಂಡ: ಆನೆಯ ತಲೆಯನ್ನು ಹೊಂದಿರುವ ಗಣೇಶನ ಸೊಂಡಿಲು ಎಡಕ್ಕೆ ಬಾಗಿರುವುದನ್ನು ವಕ್ರತುಂಡ ಎಂದು ಕರೆಯಲ್ಪಡುತ್ತದೆ. ಇದು ಪ್ರೀತಿ ಮತ್ತು ಸಹಾನುಭೂತಿಯನ್ನು ಸಂಕೇತಿಸುತ್ತದೆ.

ಏಕದಂತ – ದಂತ ಹೊಂದಿರುವ ಗಣೇಶನನ್ನು ಏಕದಂತ ಅಂತಲೂ ಕರೆಯಲಾಗುತ್ತದೆ. ಇದು ತ್ಯಾಗವನ್ನು ಸೂಚಿಸುತ್ತದೆ

ವಿಘ್ನವಿನಾಶನಾಯ – ಇದರ ಅರ್ಥ “ಅಡೆತಡೆಗಳನ್ನು ನಾಶ ಮಾಡುವವನು”

ಧೂಮ್ರವರ್ಣ – ಹೊಗೆಯಾಡುವ ಬಣ್ಣವನ್ನು ಹೊಂದಿರುವವನು. ಅತೀಂದ್ರಿಯ ಸ್ವಭಾವವನ್ನು ಪ್ರತಿನಿಧಿಸುವವನು ಎಂದರ್ಥ.

ಬಾಲಚಂದ್ರ – ಚಂದ್ರನನ್ನು ಹಣೆಯ ಮೇಲೆ ಧರಿಸಿರುವವನು, ತಂಪು ಮತ್ತು ಶಾಂತತೆಯನ್ನು ಸಂಕೇತಿಸುತ್ತಾನೆ.

ಗಜಾನನ – ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ಸಂಕೇತಿಸುವ ಆನೆಯ ಮುಖವನ್ನು ಹೊಂದಿರುವವನು.

ಹೇರಂಬ – ಇದರರ್ಥ ಅವನು ದುರ್ಬಲ ಮತ್ತು ಅಸಹಾಯಕರ ರಕ್ಷಕ. ಹಾಗಾಗೆ ಐದು ತಲೆಗಳೊಂದಿಗೆ ಚಿತ್ರಿಸಲಾಗಿದೆ.

ಲಂಬೋದರ- ಇದರರ್ಥ ಮಡಕೆಹೊಟ್ಟೆಯ ಗಣೇಶ. ಇದು ಭೌತಿಕ ತೂಕಕ್ಕಿಂತ ಆಧ್ಯಾತ್ಮಿಕ ವಿಶಾಲತೆಯನ್ನು ಸೂಚಿಸುತ್ತದೆ.

ವಿಕಾಟ್- ಇದರರ್ಥ ಬೃಹತ್ ಮತ್ತು ದೈತ್ಯ. ಗಣೇಶನ ದೇಹವು ಶಕ್ತಿ ಮತ್ತು ಬಲವನ್ನು ಸೂಚಿಸುತ್ತದೆ.

ಕಪಿಲ- ಕೆಂಪು-ಕಂದು ಬಣ್ಣದಿಂದಾಗಿ ಗಣೇಶ ಈ ಹೆಸರಿನಿಂದ ಕರೆಯಲ್ಪಟ್ಟಿದ್ದಾನೆ. ಇದು ಅವನ ನೆಲದ ಸ್ವಭಾವವನ್ನು ಸೂಚಿಸುತ್ತದೆ.

ಸುಮುಖ- ಅಂದವಾದ ಮುಖವುಳ್ಳವನು ಎಂದರ್ಥ. ಗಣೇಶನು ಶಿವ ಮತ್ತು ಪಾರ್ವತಿಯ ಗುಣಲಕ್ಷಣಗಳನ್ನು ಹೊಂದಿದ್ದು ಇದರಿಂದಾಗಿ ಅವನು ಸುಂದರವಾದ ದೇವರು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...