ಬೆಂಗಳೂರು: ಖಾಸಗಿ ಶಾಲೆಗಳ ಒತ್ತಾಯಕ್ಕೆ ಮಣಿದ ಸರ್ಕಾರ ಖಾಸಗಿ ಶಾಲೆಯ ಮಾನ್ಯತೆ ಅವಧಿಯನ್ನು 10 ವರ್ಷಕ್ಕೆ ನಿಗದಿ ಮಾಡಿದೆ.
ರಾಜ್ಯದಲ್ಲಿ ಇನ್ನು ಮುಂದೆ ಖಾಸಗಿ ಶಾಲೆಗಳ ಮೊದಲ ಮಾನ್ಯತೆಯನ್ನು 10 ವರ್ಷ ಅವಧಿಗೆ ಅನ್ವಯಿಸಲಾಗುತ್ತದೆ. ನಂತರ ನಿಬಂಧನೆಗಳನ್ನು ಅನುಸರಿಸಿ ಶಾಶ್ವತ ಮಾನ್ಯತೆ ನೀಡಲು ಸರ್ಕಾರದಿಂದ ಅವಕಾಶ ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಇದರೊಂದಿಗೆ ರಾಜ್ಯದಲ್ಲಿ ಆರ್‌ಟಿಇ ಕಾಯ್ದೆ ಜಾರಿಗೆ ಮೊದಲು ಇದ್ದಂತೆ ಮಾನ್ಯತೆ ನವೀಕರಣ, ಶಾಶ್ವತ ನವೀಕರಣಕ್ಕೆ ಅವಕಾಶ ಕಲ್ಪಿಸಬೇಕೆಂಬ ಖಾಸಗಿ ಶಾಲೆಗಳ ಒತ್ತಾಯಕ್ಕೆ ಸರ್ಕಾರ ಮಣಿದಂತಾಗಿದೆ. ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಾವಳಿಗಳಿಗೆ ಸರ್ಕಾರ ತಿದ್ದುಪಡಿ ಮಾಡಿದೆ.
ರಾಜ್ಯದಲ್ಲಿ ಆರಂಭಿಸಲು ನಿಯಮಾನಸಾರ ಮೊದಲ ವರ್ಷ ಅನುಮತಿ ನೀಡಲಾಗುವುದು. ನಂತರ ನಿಬಂಧನೆ ಅನುಸರಿಸಿ 10 ವರ್ಷ ಅವಧಿಗೆ ಮಾನ್ಯತೆ ನವೀಕರಿಸುವುದು, ಬಳಿಕ ಶಾಶ್ವತ ಮಾನ್ಯತೆ ನೀಡಲು ಅವಕಾಶ ಕಲ್ಪಿಸಲಾಗಿದೆ.
ಈ ಹಿಂದೆ ಖಾಸಗಿ ಶಾಲೆ ಆರಂಭವಾದ ಒಂದು ವರ್ಷದ ನಂತರ 15 ವರ್ಷಗಳಿಗೆ ಅನ್ವಯಿಸಿ ಮಾನ್ಯತೆ ಶಾಶ್ವತ ನವೀಕರಣ ನೀಡಲು ಕರ್ನಾಟಕ ಶಿಕ್ಷಣ ಅವಕಾಶ ಇತ್ತು. ಕೇಂದ್ರ ಸರ್ಕಾರದ ಶಿಕ್ಷಣ ಹಕ್ಕು ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ ಬಳಿಕ 2018ರಲ್ಲಿ ಮಾನ್ಯತೆ ನವೀಕರಣ ಅವಧಿಯನ್ನು ಐದು ವರ್ಷಕ್ಕೆ ಇಳಿಸಿ ಶಾಶ್ವತ ನವೀಕರಣ ಅವಕಾಶವನ್ನು ರದ್ದು ಮಾಡಲಾಗಿತ್ತು.