ಗಿರೀಶ್ ಮೂಲಿಮನಿ ನಿರ್ದೇಶನದ ಪೃಥ್ವಿ ಅಂಬಾರ್ ಅಭಿನಯದ ‘ಭುವನಂ ಗಗನಂ’ ಚಿತ್ರದ ಮೊದಲ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಭುವನ ಗಗನ ಎಂಬ ಈ ಹಾಡಿಗೆ ಅರ್ಮಾನ್ ಮಲಿಕ್ ಹಾಗೂ ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದು, ಗುಮ್ಮಿನೇನೀ ವಿಜಯ್ ಸಂಗೀತ ಸಂಯೋಜನೆ ನೀಡಿದ್ದಾರೆ ಇನ್ನುಳಿದಂತೆ ಅನಿರುದ್ಧ ಶಾಸ್ತ್ರಿ ಅವರ ಸಾಹಿತ್ಯವಿದೆ.
ಈ ಚಿತ್ರವನ್ನು ಎಸ್ ವಿ ಸಿ ಬ್ಯಾನರ್ ನಲ್ಲಿ ಎಮ್ ಮುನೇಗೌಡ ನಿರ್ಮಾಣ ಮಾಡಿದ್ದು, ಪೃಥ್ವಿ ಅಂಬಾರ್ ಸೇರಿದಂತೆ : ಪ್ರಮೋದ್, ರೇಚೆಲ್ ಡೇವಿಡ್, ಪೊನ್ನು ಅಶ್ವತಿ, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್ ಬಣ್ಣ ಹಚ್ಚಿದ್ದಾರೆ.
ಸುನೀಲ್ ಕಶ್ಯಪ್ ಅವರ ಸಂಕಲನ, ಉದಯ ಲೀಲಾ ಛಾಯಾಗ್ರಾಹಣ, ಗಿರೀಶ್ ಮೂಲಿಮನಿ, ಪ್ರಸನ್ನ ವಿಎಂ ಸಂಭಾಷಣೆ, ಹಾಗೂ ಗಿರೀಶ್ ಮೂಲಿಮನಿ ನೃತ್ಯ ನಿರ್ದೇಶನವಿದೆ.