alex Certify 3,500 ಕುಟುಂಬಗಳಿಗೆ ತಕ್ಷಣ ಜಾಗ ಖಾಲಿ ಮಾಡುವಂತೆ ಡಿಸಿ ಸೂಚನೆ: ಕಂಗಾಲಾದ ನಿವಾಸಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3,500 ಕುಟುಂಬಗಳಿಗೆ ತಕ್ಷಣ ಜಾಗ ಖಾಲಿ ಮಾಡುವಂತೆ ಡಿಸಿ ಸೂಚನೆ: ಕಂಗಾಲಾದ ನಿವಾಸಿಗಳು

ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಹೆಚ್ ಎಂತಿ ವಾರ್ಡ್ ನ ಆಶ್ರಯ ನಗರದಲ್ಲಿರುವ 3500 ಕುಟುಂಬಗಳಿಗೆ ಏಕಾಏಕಿ ಜಾಗ ಖಾಲಿ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಕಳೆದ 25 ವರ್ಷಗಳಿಂದ ಆಶ್ರಯ ನಗರದಲ್ಲಿ ವಾಸವಾಗಿದ್ದ ಕುಟುಂಬಗಳು ಇದೀಗ ಕಂಗಾಲಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ಈ ಪ್ರದೇಶದಲ್ಲಿ ಹೆಚ್ಚು ಹೈಟೆನ್ಶನ್ ವಿದ್ಯುತ್ ವೈರ್ ಗಳು ಹಾದುಹೋಗಿವೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶ ವಾಸಕ್ಕೆ ಯೋಗ್ಯವಲ್ಲ. ಅಪಾಯಕಾರಿಯಾಗಿದೆ ಎಂದು ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಅಶ್ರಯ ನಗರದ ಜನ ಜಾಗ ಖಾಲಿ ಮಾಡುವಂತೆ ಜಿಲ್ಲಾಡಳಿತ ನೊಟಿಸ್ ನೀಡಿದೆ. ಸರ್ಕಾರದ ಈ ಕ್ರಮಕ್ಕೆ ನಿವಾಸಿಗಳು ಸಿಡಿದೆದ್ದಿದ್ದಾರೆ.

ಇದ್ದಕ್ಕಿದ್ದಂತೆ ಜಾಗ ಖಾಲಿ ಮಾಡಿ ಎಂದರೆ ಹೇಗೆ? ಯಾವುದೇಸೂಕ್ತ ವ್ಯವಸ್ಥೆ, ಸೌಲಭ್ಯವನ್ನೂ ಮಾಡದೇ ಅಲ್ಲಿ ಹೋಗಿ ಇಲ್ಲಿ ಹೋಗಿ ಎಂದು ಹೇಳುತ್ತಿದ್ದಾರೆ. ಗೌಡನಹಳ್ಳಿ ಬಳಿ 1 ಎಕರೆ ಜಾಗದಲ್ಲಿ ವ್ಯವಸ್ಥೆಯಾಗಿದೆ ಎನ್ನುತ್ತಿದ್ದಾರೆ. 3500 ಕೂಟುಂಬಗಳು ಒಂದು ಎಕರೆ ಜಾಗದಲ್ಲಿ ಇರಲು ಸಾಧ್ಯವಿಲ್ಲ. ಇಲ್ಲಿನ ಕುಟುಂಬಗಳಿಗೆ ಸರ್ಕಾರ ನಿವೇಶನ ನೀಡಲಿ ಬಳಿಕ ಖಾಲಿ ಮಾಡಿಸಲಿ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...