SHOCKING : ರಾಜ್ಯದಲ್ಲಿ 7 ತಿಂಗಳಲ್ಲೇ ಬರೋಬ್ಬರಿ 340 ಅತ್ಯಾಚಾರ ಪ್ರಕರಣ ದಾಖಲು..!

ಬೆಂಗಳೂರು : ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕಾಮಾಂಧರ ಅಟ್ಟಹಾಸ ನಿಲ್ಲುತ್ತಿಲ್ಲ.ರಾಜ್ಯದಲ್ಲಿ 7 ತಿಂಗಳಲ್ಲೇ ಬರೋಬ್ಬರಿ 340 ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲೇ ಮುಳುಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಳೆದ 7 ತಿಂಗಳಲ್ಲೇ 340 ಅತ್ಯಾಚಾರ ಪ್ರಕರಣಗಳು ದಾಖಲಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಕರ್ನಾಟಕ ಅತ್ಯಾಚಾರಿಗಳ ರಾಜ್ಯ, ಹೆಣ್ಣುಮಕ್ಕಳ ಪಾಲಿಗೆ ಅಸುರಕ್ಷಿತ ತಾಣ ಎಂಬ ಕೆಟ್ಟ ಹೆಸರು ಬರುತ್ತಿದೆ. ಇದು ಮಹಾ ಶಿವಶರಣೆ ಅಕ್ಕಮಹಾದೇವಿ ನಡೆದಾಡಿದ ಕ್ಷೇತ್ರ, ಕಿತ್ತೂರು ಚೆನ್ನಮ್ಮನ ನಾಡು, ಒನಕೆ ಓಬವ್ವಳ ಛಲ ಮೆರೆದ ನೆಲ, ಕೆಳದಿ ಚೆನ್ನಮ್ಮ ,ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ ಮೊದಲಾದ ವೀರನಾರಿಯರು ಶೌರ್ಯ ಮೆರೆದ ಹೆಮ್ಮೆಯ ಬೀಡು ಎಂದು ಹೇಳಿಕೊಳ್ಳಲು ಹಿಂಜರಿಯುವಷ್ಟು ನಾರಿ ಕುಲಕ್ಕೆ ರಕ್ಷಣೆ ನೀಡಲಾಗದ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವವಾಗಿದೆ. ಸ್ತ್ರೀ ಕುಲಕ್ಕೆ ರಕ್ಷಣೆ ಕೊಡಲಾಗದ ಸರ್ಕಾರ ಇದ್ದರೂ ಸತ್ತಂತೆ, ಇದನ್ನು ಕಾಂಗ್ರೆಸ್ ಸರ್ಕಾರ ಆತ್ಮವಿಮರ್ಶೆ ಮಾಡಿಕೊಳ್ಳಲಿ, ಅರಿಸಿನ ಕುಂಕುಮದ ಬಣ್ಣವನ್ನೇ ಧ್ವಜವಾಗಿಸಿಕೊಂಡಿರುವ ಕನ್ನಡನಾಡಿನಲ್ಲಿ ಈ ಪರಿಯ ಮಹಿಳಾ ಪೀಡನೆ ನಡೆದಿರುವುದು ಇಡೀ ರಾಜ್ಯವೇ ತಲೆತಗ್ಗಿಸುವ ಸಂಗತಿ ಎಂದು ಕಿಡಿಕಾರಿದ್ದಾರೆ.

https://twitter.com/BYVijayendra/status/1827904210551324694

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read