HomeKarnatakaಕಾಮುಕ ಅಲ್ತಾಫ್‌ಗೆ “ಅಮಾಯಕ ಬ್ರದರ್‌” ಎಂಬ ಪಟ್ಟ ಕಟ್ಟುವ ಮುನ್ನ ಹಿಂದೂ ಯುವತಿಗೆ ನ್ಯಾಯ ದೊರಕಿಸಿ:...

ಕಾಮುಕ ಅಲ್ತಾಫ್‌ಗೆ “ಅಮಾಯಕ ಬ್ರದರ್‌” ಎಂಬ ಪಟ್ಟ ಕಟ್ಟುವ ಮುನ್ನ ಹಿಂದೂ ಯುವತಿಗೆ ನ್ಯಾಯ ದೊರಕಿಸಿ: ಬಿಜೆಪಿ ಆಗ್ರಹ

ಬೆಂಗಳೂರು: ಕಾರ್ಕಳದಲ್ಲಿ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಗೆ ನ್ಯಾಯಕೊಡಿಸುವಂತೆ ಬಿಜೆಪಿ ಸರ್ಕಾರವನ್ನು ಆಗ್ರಹಿಸಿದೆ.

ಕೊಲೆ,ಹಲ್ಲೆ, ಸುಲಿಗೆ, ದರೋಡೆ, ಅತ್ಯಾಚಾರಗಳನ್ನು ದೈನಂದಿನ ಚಟುವಟಿಕೆಯನ್ನಾಗಿಸಿದೆ ಕಾಂಗ್ರೆಸ್ ಸರ್ಕಾರ. ಕಾರ್ಕಳದಲ್ಲಿ ಹಿಂದೂ ಯುವತಿಯನ್ನು ಅಲ್ತಾಫ್‌ ಎಂಬ ದುರುಳ ಅಪಹರಿಸಿ ಅತ್ಯಾಚಾರವೆಸಗಿದ್ದಾನೆ. ಕಾನೂನಿನ ಭಯವಿಲ್ಲದೆ ಈ ರೀತಿ ಆರೋಪಿಗಳು ಚಿಗುರೊಡೆಯಲು ಕಾಂಗ್ರೆಸ್‌ ಸರ್ಕಾರದ ಅತಿಯಾದ ಓಲೈಕೆ ರಾಜಕಾರಣವೇ ನೇರ ಕಾರಣ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಸಿಎಂ ಸಿದ್ದರಾಮಯ್ಯ ಅವರೇ, ಡಿಸಿಎಂ ಡಿ ಕೆ ಶಿವಕುಮಾರ್ ಅವರೇ, ಕಾಮುಕ ಅಲ್ತಾಫ್‌ಗೆ “ಅಮಾಯಕ ಬ್ರದರ್‌” ಎಂಬ ಪಟ್ಟ ಕಟ್ಟುವ ಮುನ್ನ ಹಿಂದೂ ಯುವತಿಗೆ ನ್ಯಾಯ ದೊರಕಿಸಿ ಎಂದು ಆಗ್ರಹಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular