alex Certify ರಾತ್ರಿ ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ: ಕ್ಷುಲ್ಲಕ ಕಾರಣಕ್ಕೆ ಕಾರ್ ನಿಂದ ಗುದ್ದಿಸಿ ಬೈಕ್ ಸವಾರನ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ: ಕ್ಷುಲ್ಲಕ ಕಾರಣಕ್ಕೆ ಕಾರ್ ನಿಂದ ಗುದ್ದಿಸಿ ಬೈಕ್ ಸವಾರನ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರನನ್ನು ಹತ್ಯೆ ಮಾಡಲಾಗಿದೆ. ದುರುಳರು ಕಾರ್ ನಿಂದ ಗುದ್ದಿಸಿ ಬೈಕ್ ಸವಾರನನ್ನು ಕೊಲೆ ಮಾಡಿದ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಹೇಶ್ ಕೊಲೆಯಾದ ಸವಾರ ಎಂದು ಹೇಳಲಾಗಿದೆ. ಅರವಿಂದ್, ಕೇಶವ್ ಎಂಬವರು ಹತ್ಯೆ ಮಾಡಿದ ಆರೋಪ ಕೇಳಿ ಬಂದಿದೆ. ಮಹೇಶ್, ಬಾಲಾಜಿ, ನಿಖಿಲ್ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರ್ ಗೆ ಟಚ್ ಆಗಿದ್ದಕ್ಕೆ ಕಾರಿನಲ್ಲಿದ್ದವರು ಕಿರಿಕ್ ಮಾಡಿದ್ದಾರೆ.

ಯುವಕರು ಎಸ್ಕೇಪ್ ಆಗುತ್ತಿದ್ದಾರೆ ಎಂದು ಕಾರ್ ನಲ್ಲಿ ಚೇಸ್ ಮಾಡಿ ಮಹೇಶ್‌ಗೆ ಕಾರ್ ಗುದ್ದಿಸಿ ಸಾಯಿಸಿದ್ದಾರೆ. ಕೇಶವ್, ಅರವಿಂದ್ ವಿರುದ್ಧ ಪೊಲೀಸ್ ಠಾಣೆಗೆ ಯುವಕ ಬಾಲಾಜಿ ದೂರು ನೀಡಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...