alex Certify ಭಾರತದಲ್ಲಿದೆ ವಿಶ್ವದ ಅತಿ ಶ್ರೀಮಂತ ಹಳ್ಳಿ; ಅಚ್ಚರಿಗೊಳಿಸುವಂತಿದೆ ಇಲ್ಲಿನ ಬ್ಯಾಂಕುಗಳಲ್ಲಿರುವ ಹಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿದೆ ವಿಶ್ವದ ಅತಿ ಶ್ರೀಮಂತ ಹಳ್ಳಿ; ಅಚ್ಚರಿಗೊಳಿಸುವಂತಿದೆ ಇಲ್ಲಿನ ಬ್ಯಾಂಕುಗಳಲ್ಲಿರುವ ಹಣ…!

ಗುಜರಾತಿನ ಮಧಾಪರ್ ಎಂಬ ಪುಟ್ಟ ಗ್ರಾಮ ಜಗತ್ತಿನ ಅತ್ಯಂತ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಕಚ್ ಜಿಲ್ಲೆಯಲ್ಲಿದೆ. ಈ ಗ್ರಾಮದಲ್ಲಿ 7,600 ಮನೆಗಳು ಮತ್ತು 17 ಬ್ಯಾಂಕ್‌ಗಳಿವೆ. ಗ್ರಾಮವು ಪ್ರಗತಿಯ ಹೊಸ ಉದಾಹರಣೆಯಾಗಿದೆ. ಮಧಾಪರ್‌ನ ಹೆಚ್ಚಿನ ಜನರು ಅನಿವಾಸಿ ಭಾರತೀಯರಾಗಿದ್ದು, ಅವರು ವಿದೇಶದಲ್ಲಿ ವಾಸಿಸುತ್ತಿದ್ದರೂ ತಮ್ಮ ಹಳ್ಳಿಯೊಂದಿಗೆ ಸಂಪರ್ಕ ಹೊಂದಿದ್ದಾರೆ.

ಹಳ್ಳಿ ಅಂದ್ರೆ ಮಣ್ಣಿನ ಮನೆ ನೆನಪಿಗೆ ಬರುತ್ತದೆ. ಆದ್ರೆ ಮಾಧಾಪರ್ ಜನರು ಆಧುನಿಕ ಸೌಕರ್ಯಗಳೊಂದಿಗೆ ಬದುಕುತ್ತಿದ್ದಾರೆ. ಮಾಧಾಪರ್ ನಲ್ಲಿ ಆರೋಗ್ಯ ಕೇಂದ್ರಗಳು, ಶಾಲೆಗಳು, ಕಾಲೇಜುಗಳು, ದೇವಾಲಯ ಸೇರಿದಂತೆ ಸುಂದರ ಪರಿಸರವಿದೆ. 1990 ರ ದಶಕದಲ್ಲಿ ತಾಂತ್ರಿಕ ಕ್ರಾಂತಿ ಬಂದಾಗ, ಮಾಧಾಪರ್ ಕೂಡ ಅದನ್ನು ಅಳವಡಿಸಿಕೊಂಡು ಭಾರತದ ಮೊದಲ ಹೈಟೆಕ್ ಗ್ರಾಮವಾಯಿತು.

ಇಲ್ಲಿ 17 ಬ್ಯಾಂಕ್ ಗಳಲ್ಲಿ ಸರಾಸರಿ 5,000 ಕೋಟಿ ಠೇವಣಿ ಇಡಲಾಗಿದೆ. ಈ ಶ್ರೀಮಂತಿಕೆಗೆ ಮುಖ್ಯ ಕಾರಣ ವಿದೇಶದಲ್ಲಿ ನೆಲೆಸಿರುವ ಭಾರತೀಯರು. ಮಾಧಪರ್‌ನ 92,000 ಜನಸಂಖ್ಯೆಯಲ್ಲಿ, ಶೇಕಡಾ 65ರಷ್ಟು ಜನರು ಯುಎಸ್‌, ಯುಕೆ ಮತ್ತು ಕೆನಡಾದಂತಹ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಅನಿವಾಸಿ ಭಾರತೀಯರು ತಮ್ಮ ಕುಟುಂಬಗಳಿಗೆ ಹಣವನ್ನು ಕಳುಹಿಸುತ್ತಾರೆ. ಇದು ಹಳ್ಳಿಯ ಆರ್ಥಿಕತೆಯನ್ನು ಬಲಪಡಿಸುತ್ತಿದೆ.

ಮಧಾಪರ್ ವಿಲೇಜ್ ಅಸೋಸಿಯೇಷನ್ ಅನ್ನು 1968 ರಲ್ಲಿ ಲಂಡನ್‌ನಲ್ಲಿ ಸ್ಥಾಪಿಸಲಾಯಿತು. ಗ್ರಾಮದ ಜನರನ್ನು ಪರಸ್ಪರ ಸಂಪರ್ಕದಲ್ಲಿಟ್ಟುಕೊಳ್ಳುವುದು ಈ ಸಂಸ್ಥೆಯ ಉದ್ದೇಶವಾಗಿದೆ. ಇಲ್ಲಿನ ಜನರು ಕೃಷಿಯನ್ನೂ ಮಾಡುತ್ತಾರೆ. ಅವರ ಉತ್ಪನ್ನ ದೇಶಾದ್ಯಂತ ರವಾನೆಯಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...