HomeKarnatakaಕೊಟ್ಟ ಮಾತು ಉಳಿಸಿಕೊಂಡ ಸಚಿವ ಜಮೀರ್ ಅಹ್ಮದ್: ಟಿಬಿ ಡ್ಯಾಂಗೆ ಗೇಟ್ ಕೂರಿಸಿದ 20 ಕಾರ್ಮಿಕರಿಗೆ...

ಕೊಟ್ಟ ಮಾತು ಉಳಿಸಿಕೊಂಡ ಸಚಿವ ಜಮೀರ್ ಅಹ್ಮದ್: ಟಿಬಿ ಡ್ಯಾಂಗೆ ಗೇಟ್ ಕೂರಿಸಿದ 20 ಕಾರ್ಮಿಕರಿಗೆ ತಲಾ 50 ಸಾವಿರ ರೂ.

ಹೊಸಪೇಟೆ: ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ನಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿಯಾಗಿದೆ. ಸ್ಟಾಪ್ ಲಾಗ್ ಗೇಟ್ ಕೂರಿಸಿದ 20 ಕಾರ್ಮಿಕರಿಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಲಾ 50 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ.

ಜಮೀರ್ ಅವರ ಅನುಪಸ್ಥಿತಿಯಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ತುಂಗಭದ್ರಾ ಜಲಾಶಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಹಣ ಹಸ್ತಾಂತರಿಸಿದ್ದಾರೆ. ಕ್ರೇನ್ ಆಪರೇಟರ್, ಜಲಾಶಯಕ್ಕೆ ಗೇಟ್ ಇಳಿಸುವ ಕಾರ್ಯದಲ್ಲಿ ತೊಡಗಿದವರು ಸೇರಿ ಒಟ್ಟು 20 ಪ್ರಮುಖ ಕಾರ್ಮಿಕರನ್ನು ಗುರುತಿಸಿ ಬಹುಮಾನ ನೀಡಲಾಗಿದೆ.

ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಗೊಳಿಸಿದರೆ ವೈಯಕ್ತಿಕವಾಗಿ ಬಹುಮಾನ ನೀಡುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಮಾತು ಕೊಟ್ಟಿದ್ದರು. ಅದರಂತೆ ಶಾಸಕ ಗಣೇಶ್ ಅವರಿಗೆ ಜವಾಬ್ದಾರಿ ವಹಿಸಿದ್ದು, ವೈಯಕ್ತಿಕವಾಗಿ ಹಣ ಕಳುಹಿಸಿಕೊಟ್ಟು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಲ್ಕು ದಿನ ಹೊಸಪೇಟೆಯಲ್ಲಿ ಉಳಿದು ಸ್ಟಾಪ್ ಲಾಸ್ ಗೇಟ್ ಅಳವಡಿಕೆಯಾಗುವವರೆಗೆ ಮಾರ್ಗದರ್ಶನ ನೀಡಿದ ಸಚಿವ ಜಮೀರ್ ಅಹ್ಮದ್ ಶ್ರಮಿಕ ವರ್ಗದ ಪರ ಕಾಳಜಿ ತೋರಿಸಿದ್ದಾರೆ. ಇಂತಹ ಸಚಿವರನ್ನು ನಾನು ಜೀವಮಾನದಲ್ಲಿ ನೋಡಿಲ್ಲ ಎಂದು ಶಾಸಕ ಗಣೇಶ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular