ಮೋಹನ್ ಎನ್ ಮುನಿ ನಾರಾಯಣಪ್ಪ ಕಥೆ ಬರೆದು ನಿರ್ದೇಶಿಸಿರುವ ನೈಜ್ಯ ಘಟನಾಧಾರಿತ ‘ಡಾಲರ್ಸ್ ಪೇಟೆ’ ಚಿತ್ರ ಮುಂದಿನ ತಿಂಗಳು ಸೆಪ್ಟೆಂಬರ್ ನಲ್ಲಿ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಹಾಗೂ ಸೌಮ್ಯ ಜಗನ್ಮೂರ್ತಿ ಸೇರಿದಂತೆ ವೆಂಕಟ್ ರಾಜ್, ಆಕರ್ಷ್ ಕಮಲ, ಕುಶಾಲ್ಸ್, ಕೌಶಿಕ್ ಗೌಡ, ಮಹೇಂದ್ರ ಪ್ರಸಾದ್, ರಘು ರಾಮನಕೊಪ್ಪ, ಹೊನ್ನವಳ್ಳಿ ಕೃಷ್ಣ, ಹುಲಿ ಕಾರ್ತಿಕ್, ದತ್ತು ಬಣಕಾರ್, ಜಿನಿತ್, ಪ್ರತಿಮಾ ಟಿ, ಲೋಕೇಶ್ ಪ್ರಕಾಶ್, ಲೋಕೇಶ್ ಸುಕುಮಾರ್, ವಿಶ್ವ ವಿಖ್ಯಾತ್, ಬಸು ಹಿರೇಮಠ್, ಜೋತೀಶ್ ಶೆಟ್ಟಿ, ತೇಜೇಶ್ ಬಿ.ಕೆ, ಸುನಿಲ್, ಮಂಜುನಾಥ್ ಅಣ್ಣಯಪ್ಪ, ಪೃಥ್ವಿ, ಪರಶಿವ ಮೂರ್ತಿ, ಪ್ರದೀಪ್ ಚಂದರ್, ಚಕ್ರವರ್ತಿ ಬಣ್ಣ ಹಚ್ಚಿದ್ದು, ನಟ ಪೃಥ್ವಿ ಅಂಬಾರ್ ಅತಿಥಿ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಎಂಟ್ರಿಕ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಪೂಜಾ ಟಿವೈ ನಿರ್ಮಾಣ ಮಾಡಿದ್ದು, ಮಹೇಶ್ ತೊಗಟ ಸಂಕಲನ, ಆನಂದ್ ಸುಂದರೇಶ ಛಾಯಾಗ್ರಹಣ ಹಾಗೂ ಅರ್ಜುನ್ ರಾಜ್ ಮತ್ತು ನರಸಿಂಹಮೂರ್ತಿ ಅವರ ಸಾಹಸ ನಿರ್ದೇಶನವಿದೆ.